ಪಾಣಿಪತ್: ಪೊಲೀಸರ ಮೇಲೆ ಚಿರತೆ ದಾಳಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಶನಿವಾರ ಹರಿಯಾಣದ ಪಾಣಿಪತ್ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ಹಾಗೂ ಚಿರತೆ ನಡುವೆ ದೊಡ್ಡ ಕಾಳಗವೇ ನಡೆದಿದೆ.
ಕಾಡಂಚಿನ ಗ್ರಾಮವೊಂದರಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯಲು ಹೋದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಚಿರತೆ ಎಗರಿದೆ. ಈ ವೇಳೆ ಆತಂಕಗೊಂಡ ಸಿಬ್ಬಂದಿ ಲಾಠಿಯಿಂದ ಹೊಡೆದು ಚಿರತೆಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಘಟನೆ ಬಗ್ಗೆ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಪಾಣಿಪತ್ ಎಸ್ ಪಿ ಶಶಾಂಕ್ ಕುಮಾರ್ ಸಾವನ್, ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕೆಲಸ ಕಠಿಣವಾಗಿತ್ತು. ಅವರಲ್ಲಿ ಕೆಲವು ಮಂದಿ ಗಾಯಗೊಂಡಿದ್ದಾರೆ. ಅವರ ಧೈರ್ಯ ಮತ್ತು ಸಾಹಕ್ಕೆ ಸಲ್ಯೂಟ್, ಕೊನೆಯಲ್ಲಿ ಚಿರತೆ ಸೇರಿದಂತೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.