ಪೆರ್ಲ: ಕೇರಳ ನಾಲೇಜ್ ಎಕಾನೊಮಿ ಮಿಷನ್ ವತಿಯಿಂದ ನಡೆಸಲ್ಪಡುವ "ನನ್ನ ಉದ್ಯೋಗ ನನ್ನ ಹೆಮ್ಮೆ" ಎಂಬ ಉದ್ಯೋಗಾರ್ಥಿ ಸರ್ವೆಗೆ ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ " ಪಂಚಾಯತ್ ಮಟ್ಟದ ಸರ್ವೆಗೆ ಚಾಲನೆ ನೀಡಲಾಯಿತು.
ಪೆರ್ಲದ ಯಶೋಧ ಎಂಬವರ ಮನೆಯಿಂದ ಆರಂಭಿಸಿದ ಉದ್ಯೋಗಾರ್ಥಿ ಸರ್ವೆಯನ್ನು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದರು.
ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ, ಪ್ರಾಜೆಕ್ಟ್ ಎನ್ಯುಮೇಟರ್ ಪ್ರಮೀಳಾ, ಮಮತಾ, ಕಮ್ಯೂನಿಟಿ ಅಂಬಾಸಿಡರ್ ಆರ್.ಪಿ. ಸಂಧ್ಯಾ, ಸಿಡಿಎಸ್ ಸದಸ್ಯರಾದ ಸಿಸಿಲಿಯಾ, ಗಿರಿಜಾ, ಟೆಕ್ನಿಕಲ್ ಅಸಿಸ್ಟೆಂಟ್ ಸಪ್ವಾನ್, ಸಾಕ್ಷರತಾ ಪ್ರೇರಕ್ ಆನಂದ ಕೆ ಮೊದಲಾದವರು ಉಪಸ್ಥಿರಿದ್ದರು. ಪದವಿ ಇನ್ನಿತರ ಶಿಕ್ಷಣ ಪಡೆದ ಉದ್ಯೋಗಾರ್ಥಿಗಳಿಗೆ ಅರ್ಹ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ಈ ಯೋಜನೆಯಂತೆ ಅರ್ಹ ಉದ್ಯೋಗಾರ್ಥಿಗಳನ್ನು ಡಿಜಿಟಲ್ ವರ್ಕ್ ಪೋರ್ಸ್ ಮ್ಯಾನೇಜ್ ಮೆಂಟ್ ಪ್ಲಾಟ್ ಫಾರ್ಮ್ ಉಪಯೋಗಿಸಿ ಹೆಸರು ನೊಂದಾವಣೆಗೊಳಿಸಿ ಅವರಿಗೆ ಅಗತ್ಯ ಕೌಶಲ್ಯ ,ಸ್ವ ಸಾಮಾಥ್ರ್ಯದ ಮೂಲಕ ಪ್ರಬುದ್ಧಗೊಳಿಸಲು ಜ್ಯಾರಿಗೊಳಿಸಿದ ಯೋಜನೆಯು ಪ್ರತಿ ವಾರ್ಡ್ ಮಟ್ಟದಲ್ಲಿ ಸರ್ವೆ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.