ಮಧೂರು: ಕೂಡ್ಲು ಶ್ರೀ ಕುತ್ಯಾಳ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಒಂದು ವಾರ ಕಾಲ ಗೋಕಥಾಮೃತ ಸಪ್ತಾಹ ನಡೆಯಲಿದೆ. ಇದರಂಗವಾಗಿ ಸಂಯೋಜನಾ ಸಮಿತಿ ರೂಪೀಕರಿಸುವ ಉದ್ದೇಶದಿಂದ ಮೇ 3 ರಂದು ಸಂಜೆ 6.30 ಕ್ಕೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೋಕಥಾಮೃತ ಯಜ್ಞ ಸಮಿತಿ ಸಂಚಾಲಕರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.