ಕಾಸರಗೋಡು: ಕಂದಾಯ ಮತ್ತು ವಸತಿ ಸಚಿವ ಕೆ. ರಾಜನ್ ಅವರು ಮೇ 12ರಂದು ಆನ್‍ಲೈನ್ ಮೂಲಕ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10ಕ್ಕೆ ಕಾಸರಗೋಡಿನಲ್ಲಿ ನಡೆಯಲಿರುವ ಪಟ್ಟಾ ಮೇಳ, ಇ-ಕಛೇರಿಯ ಘೋಷಣೆ, ಮಧ್ಯಾಹ್ನ 12.30ಹೊಸದುರ್ಗದ ಪಟ್ಟಾ ಮೇಳ, ಇ ಕಛೇರಿಯ ಘೋಷಣೆ ನಡೆಸುವರು. 2ಗಂಟೆಗೆ ವೆಳ್ಳರಿಕುಂಡಿನಲ್ಲಿ ಪಟ್ಟಾ ಮೇಳ, ಮಾಲೋತ್ ಸ್ಮಾರ್ಟ್ ವಿಲೇಜ್ ಕಚೇರಿ ಉದ್ಘಾಟನೆ, ಸಂಜೆ 4ಕ್ಕೆ ಕೈಯೂರು ಸಿಬ್ಬಂದಿ ಕ್ವಾರ್ಟರ್ಸ್ ಉದ್ಘಾಟನೆ ಸಮಾರಂಭದಲ್ಲಿ ಸಚಿವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.