ಕಾಸರಗೋಡು: ಜಿಲ್ಲೆಯನ್ನು ನಡುಗಿಸಿದ ಪೆರಿಯ ಕಲ್ಯೋಟ್‍ನಲ್ಲಿ ಯುವಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಕಾಸರಗೋಡು ಜಿಲ್ಲಾ ಸೆಕ್ರೆಟೇರಿಯೆಟ್ ಸಮಿತಿ ಸದಸ್ಯ ಕೆ.ವಿ ಕುಞÂರಾಂನ್ ಸೇರಿದಂತೆ 22ಮಂದಿ ಆರೋಪಿಗಳು ಕೊಚ್ಚಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾದರು.
ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕಳೆಯುತ್ತಿರುವ ಆರೋಪಿಗಳನ್ನು ಆನ್‍ಲೈನ್ ಹಾಗೂ ಕಾಕನಾಡ್ ಜೈಲಿನಲ್ಲಿರುವವರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ 20ರಿಂದ 22ನೇ ವರೆಗಿನ ಆರೋಪಿಗಳಾದ ಕೆ.ವಿ ಕುಞÂರಾಮನ್, ರಾಘವನ್ ವೆಳುತ್ತೋಳಿ, ಕೆ. ವಿ ಭಾಸ್ಕರನ್ ಎಂಬವರು ನೇರವಾಗಿ ಹಾಜರಾಗಿದ್ದರು. 2019 ಫೆ. 17ರಂದು ಕೃಪೇಶ್ ಮತ್ತು ಶರತ್‍ಲಾಲ್ ಅವರನ್ನು ತಂಡ ಮಾರಕಾಯುಧದಿಂದ ಕೊಲೆ ನಡೆಸಿದ್ದು, ಸ್ಥಳೀಯ ಪೊಲೀಸರು ಹಾಗೂ ಕ್ರೈಂ ಬ್ರಾಂಚ್ ನಡೆಸಿದ್ದ ತನೀಕೆಯನ್ನು ನಂತರ ಸಿಬಿಐಗೆ ವಹಿಸಿಕೊಡಲಾಗಿದೆ.