ಉಪ್ಪಳ: ಶ್ರೀ ಸತ್ಯ ಸಾಯಿ ಸೇವಾಸಂಸ್ಥೆಗಳು ಕಾಸರಗೋಡು ಜಿಲ್ಲೆ, ಇದರ ತ್ರೈಮಾಸಿಕ ಸಮಾವೇಶ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಜರಗಿತು. ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಉತ್ತರ ಕರ್ನಾಟಕ ಅಧ್ಯಕ್ಷ ಪದ್ಮನಾಭ ಪೈ ಪ್ರಶಾಂತಿ ಧ್ವಜಾರೋಹಣ ನಡೆಸಿದರು.
ಈ ಸಂದರ್ಭ ಶ್ರಿ ಸತ್ಯ ಸಾಯಿ ಸೇವಾಸಮಿತಿ ಪೆರ್ಲ ಎಂಬ ನೂತನ ಸಮಿತಿಯ ಉಧ್ಘಾಟನೆಯನ್ನು ನೆರವೇರಿಸಿದರು. ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ವಾ ಸಂಯೋಜಕಿ ಪ್ರಿಯಾ.ಪಿ. ಪೈ, ಸೇವಾ ಮುಖ್ಯಸ್ಥ ಚಂದ್ರಶೇಖರ ವೈಟ್ ಫೀಲ್ಡ್, ಬೆಂಗಳೂರು ಉಪಸ್ಥಿತರಿದ್ದರು. ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಜಿಲ್ಲಾಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್ ಸ್ವಾಗತಿಸಿದರು.ಉಪಾಧ್ಯಕ್ಷ ಸಿ. ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಬಾಯಾರು ಪ್ರಶಾಂತಿ ಸೇವಾ ಟ್ರಸ್ಟ್ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು. ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.