ತ್ರಿಶೂರ್: ಹೆರಿಗೆ ಸಮಸ್ಯೆಯಿಂದ ಜೀವಕ್ಕೆ ಅಪಾಯದಲ್ಲಿದ್ದ ತಾಯಿ ಕೋತಿಯನ್ನು ಮನ್ನುತ್ತಿ ಪಶುವೈದ್ಯಕೀಯ ಕಾಲೇಜು ರಕ್ಷಿಸಿದೆ. ಅಪರೂಪದ ಜಾತಿಯ ಮಾರ್ಮೊಸೆಟ್ ತಾಯಿ ಮಂಗವನ್ನು ಶಸ್ತ್ರಚಿಕಿತ್ಸೆ ಮೂಲಕ ರಕ್ಷಿಸಲಾಗಿದೆ. ಶಿಶುಗಳನ್ನು ಉಳಿಸಲಾಗಲಿಲ್ಲ.
ಕೇರಳದಲ್ಲಿ ಸಾಕಿದ ಮಂಗವೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಇದೇ ಮೊದಲು. ಮೂರು ಮಕ್ಕಳಿರುವ ಕಾರಣ ಗರ್ಭಾಶಯವು ಬೆಳವಣಿಗೆಯಾಗಲು ಕಷ್ಟವಾಗಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ಸೂಚಿಸಿದರು. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಮೂರೂ ಮರಿಗಳು ನಿರ್ಜೀವವಾಗಿತ್ತೆಂದು ತಿಳಿದುಬಂದಿದೆ. ಗರ್ಭನಿರೋಧಕ ಮಾತ್ರೆಗಳನ್ನು ಕೊಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಸಿಸೇರಿಯನ್ ಮಾಡಲು ನಿರ್ಧರಿಸಲಾಯಿತು.
ಮನ್ನುತಿ ಅನಿಮಲ್ ರೀ ಪೆÇ್ರಡಕ್ಷನ್ ವಿಭಾಗದ ಮುಖ್ಯಸ್ಥ ಡಾ. ಸಿ. ಜಯಕುಮಾರ್ ಮತ್ತು ಸಹಾಯಕರಾದ ಡಾ. ಹಿರಣ್ ಎಂ.ಹರ್ಷನ್, ಡಾ.ಮ್ಯಾಗ್ನಸ್ ಪಾಲ್ ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ವಹಿಸಿದ್ದರು.
ಮೂರು ವರ್ಷದ ಕೋತಿಯನ್ನು ಕುನ್ನಂಕುಳಂ ಮೂಲದವರ ಪರವಾನಿಗೆಯಲ್ಲಿ ಸಾಕಲಾಗಿದೆ. ಬಣ್ಣ ಕಪ್ಪು ಮತ್ತು ಬಿಳಿ. ಇದಕ್ಕೆ ಸುಮಾರು 2 ಲಕ್ಷ ರೂ. ಮೌಲ್ಯವಿದೆ. ಕೊನೆಯ ಎರಡು ಹೆರಿಗೆಗಳು ನಾರ್ಮಲ್ ಆಗಿದ್ದವು. ಪ್ರತಿಯೊಂದರಲ್ಲೂ ಎರಡು ಮರಿಗಳಿವೆ.