ಸಮರಸ ಚಿತ್ರಸುದ್ದಿ: ಮಂಜೇಶ್ವರ: ಇತ್ತೀಚೆಗೆ ಅನಿರೀಕ್ಷಿತ ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡು ತನ್ನ ಒಂದು ಕಾಲನ್ನು ಸ್ಥಳದಲ್ಲೇ ಕಳೆದುಕೊಂಡು ಇನ್ನೊಂದು ಕಾಲೂ ಪೂರ್ತಿ ಹುಡಿಯಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಡಾ. ಸನತ್ ಭಂಡಾರಿ ಮತ್ತು ತಂಡದಿಂದ ಉತ್ತಮ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತೂರು ಬೆಟ್ಟಂಪ್ಪಾಡಿಯ ಹರಿನಾರಾಯಣ ಭಟ್ ಅವರ ಮಗಳು 16 ವರ್ಷ ಪ್ರಾಯದ ಕುಮಾರಿ ಭಾಗ್ಯಲಕ್ಷ್ಮಿ ಎಂಬ ಬಾಲಕಿಯ ಬಗ್ಗೆ ಮಂಜೇಶ್ವರ ಮೀಂಜದ ರಾಜೇಶ್ ಭಟ್ ಮುಂದಿಲ ಇವರ ಮೂಲಕ ತಿಳಿದುಕೊಂಡ ಮೀಂಜ ಮೀಯಪದವಿನವರೇ ಆಗಿದ್ದು ಅನೇಕ ವರ್ಷಗಳಿಂದ ದೂರದ ಸೌದಿಅರೇಬಿಯದಲ್ಲಿ ಉದ್ಯೋಗ ಮಾಡುತ್ತಿರುವ ಗೋಪಾಲ್ ಶೆಟ್ಟಿಯವರು ತಾವು ಉಪಾಧ್ಯಕ್ಷರಾಗಿರುವ ಮಂಗಳೂರು ಅಸೋಸಿಯೇಶನ್ ಸೌದಿಅರೇಬಿಯ ಸಂಘಟನೆಯ ಸಹಕಾರದೊಂದಿಗೆ ತುರ್ತಾಗಿ ಸ್ಪಂದಿಸಿ ರೂ.ಒಂದು ಲಕ್ಷ ಮೊತ್ತವನ್ನು ಅಲ್ಲಿ ಸಂಗ್ರಹಿಸಿ ಇತ್ತೀಚೆಗೆ ಸ್ವದೇಶಕ್ಕೆ ಬಂದಾಗ ಅವರ ಸಹೋದರ ಸುಂದರ ಶೆಟ್ಟಿ ಮುಂಬೈ ನ್ಯಾಯವಾದಿ ಗುರುಪ್ರಸಾದ್ ಶೆಟ್ಟಿ ಮಂಗಳೂರು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್ ಹಾಗೂ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರ ಉಪಸ್ಥಿತಿಯಲ್ಲಿ ಕುಮಾರಿ ಭಾಗ್ಯಲಕ್ಷ್ಮಿಯವರಿಗೆ ಅವರ ತಾಯಿ ತಂದೆಯವರ ಸಮಕ್ಷಮ ಹಸ್ತಾಂತರಿಸಿ ಸಾಂತ್ವನಗೈದರು.