ಕಾಸರಗೋಡು: ಕಾಞಂಗಾಡು ಬ್ಲಾಕ್ ಪಂಚಾಯತಿಗೆ ಪ್ರಥಮ ಸ್ವಾವಲಂಬಿ ಪ್ರಶಸ್ತಿ ವಿತರಿಸಲಾಯಿತು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಐಎಸ್ ಕ್ರಿಯಾ ಯೋಜನೆ ದೋಷಗಳು ಮತ್ತು ತಿದ್ದುಪಡಿಗಳ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಪ್ರಶಸ್ತಿ ವಿತರಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಮಡಿಕೈ ಗ್ರಾಮ ಪಂಚಾಯಿತಿಗೆ ಉತ್ತಮ ಪಂಚಾಯಿತಿ ಎಂಬ ಪ್ರಥಮ ಸ್ವಾವಲಂಬಿ ಪ್ರಶಸ್ತಿ ಲಭಿಸಿದೆ. ಪುಲ್ಲೂರು ಪೆರಿಯ ಪಂಚಾಯತಿ ದ್ವಿತೀಯ ಸ್ಥಾನ ಪಡೆಯಿತು. ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ, ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಪ್ರಥಮ ಸ್ವಾವಲಂಬಿ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರಿಂದ ಸ್ವೀಕರಿಸಿದರು.
ಪುಲ್ಲೂರು-ಪೆರಿಯ ಪಂಚಾಯತಿಗೆ ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ಗ್ರಾ.ಪಂ.ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ಸದಸ್ಯರು ಹಾಗೂ ಪಂಚಾಯತಿ ನೌಕರರಿಗೆ ಬ್ಲಾಕ್ ಪಂಚಾಯತಿ ಅಧ್ಯಕ್ಷ ಕೆ.ಮಣಿಕಂಠ|ನ್ ಪ್ರದಾನ ಮಾಡಿದರು.
ಬ್ಲಾಕ್ ಕಾರ್ಯಕ್ರಮಾಧಿಕಾರಿ ಪಿ.ರಾಗೇಶ್ ವರದಿ ಮಂಡಿಸಿದರು. ಜಂಟಿ ಕಾರ್ಯಕ್ರಮ ಸಂಯೋಜಕ ಹಾಗೂ ಯೋಜನಾ ನಿರ್ದೇಶಕ ಕೆ.ಪ್ರದೀಪನ್ ಪ್ರಶಸ್ತಿಯನ್ನು ಪ್ರಕಟಿಸಿದರು. ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ, ಎಂ.ಕುಮಾರನ್, ಬ್ಲಾಕ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಅಬ್ದುರಹ್ಮಾನ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಸೀತಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜಯನ್, ಬ್ಲಾಕ್ ಪಂಚಾಯಿತಿ ಸದಸ್ಯ ನ್ಯಾಯವಾದಿ ಎಂ.ಕೆ.ಬಾಬುರಾಜ್ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಐಎಸ್ ಕ್ರಿಯಾ ಯೋಜನೆ ಕುರಿತು ಕೆ.ಪಿ.ಶೆರೀಫ್ ಹಾಗೂ ಟಿ.ವಿ.ಅನೀಶ್ ಮಾತನಾಡಿದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ ಸ್ವಾಗತಿಸಿ, ಡಿ. ಓ.ಎಸ್.ಜಯಪ್ರಕಾಶ್ ವಂದಿಸಿದರು.