ಕಾಸರಗೋಡು: ಕೋಯಿಕ್ಕೋಡ್ ಫರೂಕ ರೈಲ್ವೆ ನಿಲ್ದಾಣ ಸನಿಹ ರೈಲ್ವೆ ಸೇತುವೆಯಲ್ಲಿ ಸೆಲ್ಫಿ ತೆಗೆಯುವ ಮಧ್ಯೆ ರೈಲು ಡಿಕ್ಕಿಯಾಗಿ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟಿದ್ದು, ಈಕೆ ಸ್ನೇಹಿತ ಗಂಭೀರ ಗಾಯಗೊಂಡಿದ್ದಾನೆ. ಕೋಯಿಕ್ಕೋಡ್ ಕರುವನ್‍ತಿರುತ್ತಿ ನಿವಾಸಿ ನಫಾತ್ ಫತಾಹ್(16)ಮೃತಪಟ್ಟ ವಿದ್ಯಾರ್ಥಿನಿ. ಈಕೆ ಸ್ನೇಹಿತ ಪೆರಿಂಗೋವ್ ಪಟ್ಟಾಯತ್ತಿಲ್ ನಿವಾಸಿ ಮಹಮ್ಮದ್ ಇಶಾಮ್ ಗಂಭೀರ ಗಾಯಗೊಂಡಿದ್ದು, ಈತನನ್ನು ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಮಧ್ಯಾಹ್ನ ರೈಲ್ವೆ ಸೇತುವೆಯಲ್ಲಿ ಸೆಲ್ಫಿ ತೆಗೆಯುವ ಮಧ್ಯೆ ಕೊಯಂಬತ್ತುರ್-ಮಂಗಳೂರು ಪ್ಯಾಸೆಂಜರ್ ರೈಲು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ರೈಲು ಡಿಕ್ಕಿಯಾಗುತ್ತಿದ್ದಂತೆ ಬಾಲಕಿ ಹೊಳೆಗೆ ಹಾಗೂ ಇಶಾಮ್ ಹಳಿಗೂ ಬಿದ್ದಿದ್ದನು. ಇಶಾಮ್ ತಲೆ ಹಾಗೂ ಕಾಲಿಗೆ ಗಾಯಗಳುಂಟಾಗಿದೆ.