ಕೊಚ್ಚಿ: ಅಲಪ್ಪುಳದಲ್ಲಿ ದ್ವೇಷದ ಘೋಷಣೆಗಳನ್ನು ಕೂಗಿದ್ದ ಮಗುವನ್ನು ಗುರುತಿಸಲಾಗಿದೆ. ಮಗು ಎರ್ನಾಕುಲಂನ ಪಲ್ಲುರುತಿ ಮೂಲದ್ದು ಎಂದು ಅಲಪ್ಪುಳ ಪೊಲೀಸರು ತಿಳಿಸಿದ್ದಾರೆ. ಮಗುವಿಗೆ ಕೌನ್ಸೆಲಿಂಗ್ ನಡೆಸಿ ಸಾಕ್ಷಿ ಹೇಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿಗೆ ತರಬೇತಿ ನೀಡಿದವರು ಮತ್ತು ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪಾಪ್ಯುಲರ್ ಫ್ರಂಟ್‌ನ ಪ್ರಚೋದನಕಾರಿ ಘೋಷಣೆ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಂದು ಬೆಳಗ್ಗೆ ಮಗುವನ್ನು ಗುರುತಿಸಲಾಗಿದೆ ಎಂದು ಆಲಪ್ಪುಳ ಪೊಲೀಸರು ತಿಳಿಸಿದ್ದಾರೆ. ಸದ್ಯ ಮಗುವಿನ ವಿರುದ್ಧ ಬೇರೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಇದೇ ವೇಳೆ ಮಗು ಹಾಗೂ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ಕಾರಣ ತಲೆಮರೆಸಿಕೊಂಡಿರುವ ಸೂಚನೆಗಳೂ ಇವೆ. ಪೊಲೀಸರು ಈಗಾಗಲೇ ಪಲ್ಲಿರುತಿ ತಲುಪಿದ್ದಾರೆ. ಮಗುವಿನ ಪೂರ್ವಿಕರ ಮನೆಯನ್ನು ತಪಾಸಣೆ ನಡಸಲಾಗುತ್ತಿದೆ. ವಿವಿಧ ತಂಡಗಳಲ್ಲಿ ಶೋಧ ನಡೆಸಲಿದ್ದು, ರಾಜ್ಯಾದ್ಯಂತ ತನಿಖೆ ಪ್ರಗತಿಯಲ್ಲಿದೆ ಎಂದು ಆಲಪ್ಪುಳ ಪೊಲೀಸರು ತಿಳಿದ್ದಾರೆ.
ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ರ್ಯಾಲಿಯಲ್ಲಿ ಹತ್ಯೆಯ ಘೋಷಣೆಗಳನ್ನು ಕೂಗಿದ್ದ ಈ ಅಪ್ರಾಪ್ತನ ಘೋಷಣೆಗಳು ಬಳಿಕ ವಿವಾದಕ್ಕೊಳಗಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಿದ್ದರು. ಮಗುವೊಂದು ರ್ಯಾಲಿಯಲ್ಲಿ ಪಾಲ್ಗೊಂಡು ಹಿಂದೂ ಮತ್ತು ಕ್ರಿಶ್ಚಿಯನ್ನರ ವಿರುದ್ಧ ಘೋಷಣೆಗಳನ್ನು ಕೂಗಿರುವುದು ಉಲ್ಬಣತೆಗೆ ಕಾರಣವಾಯಿತು.