ಚೇರ್ತಲ: ಚೇರ್ತಲ ಎಸ್.ಎಚ್.ನ ನರ್ಸಿಂಗ್ ಕಾಲೇಜು ವಿರುದ್ಧ ವಿದ್ಯಾರ್ಥಿಗಳು ವ್ಯಾಪಕವಾಗಿ ದೂರು ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ದೂರಿನ ಪ್ರಕಾರ ಕಾಲೇಜು ಉಪಪ್ರಾಂಶುಪಾಲರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ಎರಡು ದಿನಗಳ ಹಿಂದೆ ಕಾಲೇಜಿನ ವಿರುದ್ಧ ವಿದ್ಯಾರ್ಥಿಗಳಿಂದ ಧ್ವನಿ ಸಂದೇಶ ಬಂದ ಹಿನ್ನೆಲೆಯಲ್ಲಿ ನರ್ಸಿಂಗ್ ಕೌನ್ಸಿಲ್ ಪ್ರತಿನಿಧಿಗಳು ಸಂಸ್ಥೆಯಲ್ಲಿ ತಪಾಸಣೆ ನಡೆಸಿ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸುಮಾರು 120 ಅಂತಿಮ ವರ್ಷದ ವಿದ್ಯಾರ್ಥಿಗಳು ಅವಲತ್ತುಕೊಂಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಕೇರಳ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ವಿದ್ಯಾರ್ಥಿನಿಯರಿಂದಲೇ ವೈದ್ಯರ ಪಾದರಕ್ಷೆ ಸ್ವಚ್ಛಗೊಳಿಸಲಾಗುತ್ತಿದೆ, ಆಸ್ಪತ್ರೆಯ ವಾರ್ಡ್ ವಾಶ್ ಮಾಡಲಾಗುತ್ತಿದೆ, ಆಸ್ಪತ್ರೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜು ಉಪಪ್ರಾಂಶುಪಾಲರ ವಿರುದ್ದವೂ ದೂರು ನೀಡಿದ್ದಾರೆ. ಉಪಪ್ರಾಂಶುಪಾಲರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿದ್ಯಾರ್ಥಿಗಳು ಒಟ್ಟಿಗೆ ನಡೆದುಕೊಂಡು ಸಾಗಿದರೆ, 'ನೀವು ಸಲಿಂಗಕಾಮಿಗಳೇ?' ಎಂದೂ ವಿದ್ಯಾರ್ಥಿಯರ ಸಮವಸ್ತ್ರವು ಸುಕ್ಕುಗಟ್ಟಿದರೆ, ಅದನ್ನು ಲೈಂಗಿPವಾಗಿ ವ್ಯಾಖ್ಯಾನಿಸಲಾಗುವುದಾಗಿ ವಿದ್ಯಾರ್ಥಿನಿಯರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾಸ್ಟೆಲ್ ನಲ್ಲಿ ಜೈಲಿನ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಕ್ರಿಶ್ಚಿಯನ್ ಅಲ್ಲದ ಮಕ್ಕಳನ್ನೂ ಚರ್ಚ್‍ಗೆ ತೆರಳಲು ಒತ್ತಾಯಿಸಲಾಗುತ್ತಿದೆ. ಹೊರಗೆ ತೆರಳಲು ಮತ್ತು ಪೋಷಕರ ಭೇಟಿಗೆ ನುಮತಿಸಲಾಗುವುದಿಲ್ಲ. ಪೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ತಕ್ಷಣ ಪಿಟಿಎ ಸಭೆ ಕರೆಯುವಂತೆ ನರ್ಸಿಂಗ್ ಕೌನ್ಸಿಲ್ ಸೂಚಿಸಿದೆ.
ಹಳೆಯ ವಿದ್ಯಾರ್ಥಿಗಳೂ ದೂರು ಸಲ್ಲಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳು ಆಸ್ಪತ್ರೆಯನ್ನು ಸ್ವಚ್ಛಗೊಳಿಸಿದ್ದು, ಕ್ಲೀನರ್‍ಗಳಲ್ಲ ಎಂದು ಬಹಿರಂಗಪಡಿಸಿದ್ದಾರೆ. ಹಾಸ್ಟೆಲ್ ಆಹಾರದಲ್ಲಿ ಕೀಟಗಳು, ಹಾವಿನ ಮರಿಗಳು ಮತ್ತು ಹುಳುಗಳು ನಿಯಮಿತವಾಗಿ ಕಂಡುಬರುತ್ತವೆ. ಹೊಸ ವಿದ್ಯಾರ್ಥಿಗಳು ಬಂದ ದಿನವೇ ಒಳ್ಳೆಯ ಆಹಾರ ನೀಡಲಾಗುತ್ತದೆ. ಹಳೆ ವಿದ್ಯಾರ್ಥಿಗಳು ಕೂಡ ನೀರಿನಲ್ಲಿ ಹುಳುಗಳಿರುತ್ತಿದ್ದವು ಎಂದು ಹೇಳಿರುವರು. ಆದರೆ ಉಪಪ್ರಾಂಶುಪಾಲರು ಇಂತಹ ಆರೋಪಗಳನ್ನು ನಿರಾಕರಿಸಿದ್ದಾರೆ.