ಕಾಸರಗೋಡು: ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಒಳಗಿನ ತಿಂಡಿ ತಿನಿಸು ಮಳಿಗೆಯಿಂದ ಖರೀದಿಸಿದ ಉದ್ದಿನ ವಡೆಯಲ್ಲಿ ಹುಳ ಪತ್ತೆಯಾಗಿ ಆತಂಕ ಮೂಡಿಸಿದೆ. ಆಸ್ಪತ್ರೆಯಲ್ಲಿ ರೋಗಿಯ ಜೊತೆಯಲ್ಲಿದ್ದವರು ಸೇವಿಸಲು ಖರೀದಿಸಿದ ವಡೆಯೊಳಗಡೆ ಸತ್ತ ಹುಳ ಪತ್ತೆಯಾಯಿತು. ಸ್ನ್ಯಾಕ್ ಬಾರ್ ಅನ್ನು ಆಸ್ಪತ್ರೆಯ ಸಿಬ್ಬಂದಿ ಮಂಡಳಿ ನಡೆಸುತ್ತಿದೆ.
ತಿಂಡಿ ತಿನಿಸುಗಳಲ್ಲಿ ಹೊರರಾಜ್ಯದ ಕಾರ್ಮಿಕರು ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತದೆ. ಘಟನೆ ಗಮನಕ್ಕೆ ಬಂದ ನಂತರ ಆಸ್ಪತ್ರೆಯ ಅಧಿಕಾರಿಗಳು ಸ್ಟಾಲ್ ಮುಚ್ಚಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಕೂಡ ಇಲ್ಲಿ ತಪಾಸಣೆ ನಡೆಸಿದೆ.
ಆಸ್ಪತ್ರೆಯಲ್ಲಿ ಮಧ್ಯಾಹ್ನದ ಊಟ ಸೇರಿದಂತೆ ಕ್ಯಾಂಟೀನ್ ಲಭ್ಯವಿಲ್ಲ. ಇದಕ್ಕಾಗಿಯೇ ಸ್ಟಾಫ್ ಕೌನ್ಸಿಲ್ ನೇತೃತ್ವದಲ್ಲಿ ತಿಂಡಿ ತಿನಿಸುಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಇತರ ಅಂಗಡಿಗಳಲ್ಲಿ ನೀಡಲಾದ ಹೋಂ ಮೇಡ್ ತಿನಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಿನಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ಶವರ್ಮಾ ಸೇವಿಸಿದ ವಿದ್ಯಾರ್ಥಿನಿಯೋರ್ವೆ ವಿಷಾಹಾರ ಕಾರಣ ಸಾವನ್ನಪ್ಪಿದ ಘಟನೆ ವಿವಾದವಾಗಿತ್ತು.