ಚೆನ್ನೈ: ಅಮೆರಿಕದ ಬಹುರಾಷ್ಟ್ರೀಯ ಔಷಧ ತಯಾರಕ ಕಂಪನಿ ಫೈಜರ್, ಏಷ್ಯಾದ ಮೊದಲ ಜಾಗತಿಕ ಔಷಧ ಅಭಿವೃದ್ಧಿ ಕೇಂದ್ರವನ್ನು ಚೆನ್ನೈಯಲ್ಲಿ ಸ್ಥಾಪಿಸಿದೆ. ಐಐಟಿ ಮದ್ರಾಸ್‌ನ ರಿಸರ್ಚ್ ಪಾರ್ಕ್‌ನಲ್ಲಿ ₹150 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ.
ಚೆನ್ನೈ: ಅಮೆರಿಕದ ಬಹುರಾಷ್ಟ್ರೀಯ ಔಷಧ ತಯಾರಕ ಕಂಪನಿ ಫೈಜರ್, ಏಷ್ಯಾದ ಮೊದಲ ಜಾಗತಿಕ ಔಷಧ ಅಭಿವೃದ್ಧಿ ಕೇಂದ್ರವನ್ನು ಚೆನ್ನೈಯಲ್ಲಿ ಸ್ಥಾಪಿಸಿದೆ. ಐಐಟಿ ಮದ್ರಾಸ್‌ನ ರಿಸರ್ಚ್ ಪಾರ್ಕ್‌ನಲ್ಲಿ ₹150 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ.
ಈ ಕೇಂದ್ರದಲ್ಲಿ 250 ವಿಜ್ಞಾನಿಗಳು, ತಂತ್ರಜ್ಞರು ಕೆಲಸ ಮಾಡಲಿದ್ದು, ಹೊಸ ಔಷಧಗಳು, 'ಸಕ್ರಿಯ ಔಷಧೀಯ ಪದಾರ್ಥ'ಗಳನ್ನು (ಎಪಿಐಎಸ್) ಅಭಿವೃದ್ಧಿಪಡಿಸಲಿದ್ದಾರೆ
ಈ ಕೇಂದ್ರವು ಜಾಗತಿಕ ಮಾರುಕಟ್ಟೆಗಳಿಗೆ ಔಷಧವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಫೈಜರ್‌ನ ಉತ್ಪಾದನಾ ಕೇಂದ್ರಗಳಿಗೂ ನೆರವಾಗಲಿದೆ. ಇದು ವಿಶ್ವದಾದ್ಯಂತ ಸ್ಥಾಪಿಸಲಾಗಿರುವ 12 ಕೇಂದ್ರಗಳಲ್ಲಿ ಒಂದಾಗಿದೆ ಎಂದು ಕಂಪನಿ ತಿಳಿಸಿದೆ.