ಬದಿಯಡ್ಕ: ಕೊಲ್ಲಂಗಾನ ಅನಂತಶ್ರೀಯ ಪಂಚಮ ವಾರ್ಷಿಕೋತ್ಸವ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು, ಅನಂತಶ್ರೀ ಟ್ರಸ್ಟ್ ಕಾಸರಗೋಡು ಸಹಯೋಗದಲ್ಲಿ ವಿವಿಧ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದ ಬೆಳಿಗ್ಗೆ ಗಣಪತಿ ಹವನ, ದುರ್ಗಾ ಹೋಮ ನಡೆಯಿತು. ಬಳಿಕ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಸಂಗೀತ ಸುಧೆ ಗಾಯನ ನಡೆಯಿತು. ಪಕ್ಕವಾದ್ಯದಲ್ಲಿ ತೇಜಸ್(ತಬಲಾ) ಹಾಗೂ ಪ್ರಕಾಶ್ ಆಚಾರ್ಯ ಕುಂಟಾರು(ಹಾರ್ಮೋನಿಯಂ) ನಲ್ಲಿ ಸಹಕರಿಸಿದರು.
ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬ್ರಹ್ಮಶ್ರೀ ಪದ್ಮನಾಭ ಬರ್ಲಾಯ ಬೊಳ್ಳಾರು, ಬೇಕೂರು ದೀಪ ಬೆಳಗಿಸಿ ಚಾಲನೆ ನೀಡಿದರು. ಬ್ರಹ್ಮಶ್ರೀ ಚೇತನ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕತೆಗಳು ಮೇಳೈಸಿದಾಗ ಬದುಕು ಸಂಪೂರ್ಣ ಸುಂದರವಾಗುತ್ತದೆ. ಪೂಜಾದಿ ವಿಧಿವಿಧಾನಗಳು ಆಂತರಂಗಿಕವಾಗಿ ಉದ್ದೀಪನಗೊಳಿಸುವುದರ ಜೊತೆಗೆ ಶಕ್ತಿ ನೀಡಿದರೆ, ಲೌಕಿಕ ಚಟುವಟಿಕೆಗಳು ವ್ಯಕ್ತಿಯ ಬೆಳವಣಿಗೆಯಲ್ಲಿ ಬಹಿರ್ಮುಖ ಬೆಂಬಲ, ಜನಮನ್ನಣೆ ಮತ್ತು ತೃಪ್ತಿ ನೀಡುತ್ತದೆ ಎಂದರು.
ಗಡಿನಾಡ ಸಾಹಿತ್ತಿಕ, ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಇದರ ಅಧ್ಯಕ್ಷ ಚನಿಯಪ್ಪ ನಾೈಯ್ಕ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಶುಭಾಶಂಸನೆಗೈಯ್ದರು. ಪ್ರಮುಖರಾದ ತಂತ್ರಿ ಗಣಾಧಿರಾಜ ಉಪಾಧ್ಯಾಯ, ಎ.ಆರ್.ಸುಬ್ಬಯ್ಯಕಟ್ಟೆ, ಸುರೇಶ್ ಶಿತ್ತಿಲ್ಲಾಯ, ವಾಮನ ರಾವ್ ಬೇಕಲ, ಉದಯಶಂಕರ ಕೊಲ್ಲಂಗಾನ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕೆ.ನಂಬ್ಯಾರ್, ಸಂಘಟಕ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಪತ್ರಕರ್ತ ರವಿ ನಾಯ್ಕಾಪು, ಭಕ್ತಿ ಸಾಹಿತಿ ಪರಮೇಶ್ವರ ನಾಯ್ಕ ಅರ್ತಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಯೋಜಕ ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಸನ್ಮಾನಿತರ ಪರಿಚಯ ನೀಡಿದರು. ಪುರುಷೋತ್ತಮ ಭಟ್ ಕೆ ವಂದಿಸಿದರು. ರವಿ ನಾಯ್ಕಾಪು ನಿರೂಪಿಸಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮಂಜುನಾಥ ಡಿ.ಮಾನ್ಯ, ಶ|ಆಮಪ್ರಸಾದ್ ಮಾನ್ಯ, ಪುರುಷೋತ್ತಮ ಪೆರ್ಲ, ವಾಮನ ರಾವ್ ಬೇಕಲ, ರವಿಶಂಕರ ಶೆಟ್ಟಿ ಕೊಲ್ಲಂಗಾನ, ಅಖಿಲೇಶ್ ನಗುಮುಗಂ, ವಿದ್ಯಾಲಕ್ಷ್ಮೀ ಅಣಂಗೂರು, ಪಿ.ಪರಮೇಶ್ವರ ಕಲ್ಲಕಟ್ಟ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ವಸಂತ ಬಾರಡ್ಕ ಮತ್ತು ತಂಡದವರಿಂದ ಗಾನಸುಧೆ ಸುಗಮ ಸಂಗೀತ, ಜಾನಪದ ಗಾಯನ ನಡೆಯಿತು. ಅಪರಾಹ್ನ ಬಹುಭಾಷಾ ಕವಿಗೋಷ್ಠಿ ನಡೆಯಿತು. ಸಾಹಿತಿ, ವೈಂಗ್ಯಚಿತ್ರ ಕಲಾವಿದ ಬಾಲ ಮಧುರಕಾನನ ಅಧ್ಯಕ್ಷತೆ ವಹಿಸಿದ್ದರು.
ಸಂಜೆ 5 ರಿಂದ ಶ್ರೀಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಸಾಂಸ್ಕøತಿಕಗಳು, ರಾತ್ರಿ 8 ರಿಂದ ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.