ಕುಂಬಳೆ : ಕುದ್ರೆಪ್ಪಾಡಿ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜಯರಾಮ ದೇವಸ್ಯ ಮತ್ತು ಬಳಗದವರಿಂದ ಸುರೇಶ್ ಶೆಟ್ಟಿ ಹೊಸಮನೆ ಕುದ್ರೆಪ್ಪಾಡಿ ಅವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಲೆ ಕೂಟ ಜರಗಿತು.
"ಕೃಷ್ಣ ಸಂಧಾನ ಕರ್ಣ ಬೇಧನ" ಆಖ್ಯಾಯಿಕೆಯ ತಾಳಮದ್ದಳೆಯ ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ಶಿವಶಂಕರ ಭಟ್ , ಗೋಪಾಲಕೃಷ್ಣ ನಾವಡ ಮಧೂರು, ಮುರಳಿ ಮಾಧವ ಮಧೂರು ಸಹಕರಿಸಿದರು. ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಕರುಣಾಕರ ಶೆಟ್ಟಿ, ಗೋಪಾಕೃಷ್ಣ ನಾಯಕ್ ಸೂರಂಬೈಲ್, ಜಯರಾಮ ದೇವಸ್ಯ ಸಹಕರಿಸಿದರು.