HEALTH TIPS

ಏಮ್ಸ್ ಹೋರಾಟ ರಾಜ್ಯ ರಾಜಧಾನಿಗೆ ಸ್ಥಳಾಂತರಿಸಲು ತೀರ್ಮಾನ

                  ಕಾಸರಗೋಡು: ಕೇರಳ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಸರನ್ನು ಸೇರಿಸಬೇಕೆಂದು ಆಗ್ರಹಿಸಿ ಏಮ್ಸ್ ಜನತಾ ಒಕ್ಕೂಟ ನಡೆಸುತ್ತಿರುವ ಧರಣಿಯನ್ನು ರಾಜ್ಯ ರಾಜಧಾನಿಗೆ ಸ್ಥಳಾಂತರಿಸಲು ತೀಮಾನಿÂಸಲಾಗಿದೆ. ಕೇಂದ್ರವು ಕೇರಳಕ್ಕೆ ಏಮ್ಸ್ ಮಂಜೂರು ಮಾಡಿದರೂ, ಇದರಲ್ಲಿ ಕಾಸರಗೋಡಿನ ಹೆಸರನ್ನು ಸೇರಿಸದಿರುವುದನ್ನು ವಿರೋಧಿಸಿ ಕಾಸರಗೋಡಿನಲ್ಲಿ ನಡೆದುಬರುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಸೆಕ್ರೆಟರಿಯೇಟ್ ಎದುರು ನಡೆಸಲು ಏಮ್ಸ್ ಜನಪರ ಒಕ್ಕೂಟ ಸಭೆಯಲ್ಲಿ ತೀರ್ಮಾಣಿಸಲಾಯಿತು.

              ಪ್ರಸಕ್ತ ಏಮ್ಸ್ ಪರಿಗಣನೆಯಲ್ಲಿರುವ ನಾಲ್ಕು ಜಿಲ್ಲೆಗಳ ಜತೆಗೆ ಕಾಸರಗೋಡಿನ ಹೆಸರನ್ನೂ ಸೇರ್ಪಡೆಗೊಳಿಸಬೇಕು. ಎಂಡೋಸಲ್ಫಾನ್ ದುರಂತ ಮರುಕಳಿಸುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಸಾಮಥ್ರ್ಯವನ್ನು ಏಮ್ಸ್ ಒದಗಿಸುವುದು. ಇದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವುದು ಕೇರಳ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂಬುದನ್ನು ಮರೆಯಬಾರದು.

ಜಿಲ್ಲೆಯಲ್ಲಿ ಎಂಡೋಸಲ್ಫಾನ್ ನಿಷೇಧವಾಗಿ ಎರಡು ದಶಕಗಳು ಕಳೆದಿದ್ದು, ಜನನ ದೋಷ ಹಾಗೂ ಅಕಾಲಿಕ ಮರಣ ಹೊಂದಿರುವ ಮಕ್ಕಳ ಸಂಕಷ್ಟವನ್ನು ಗುರುತಿಸಲು ಸರ್ಕಾರ ಮುಂದಾಗಬೇಕು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಪ್ಪಿಗೆ ಸೂಚಿಸಿದಲ್ಲಿ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರು ಸೇರ್ಪಡೆಗೊಳ್ಳುವುದರಲ್ಲಿ ಸಂಶಯವಿಲ್ಲ.

                 ಆರೋಗ್ಯ ಸ್ವಾತಂತ್ರ್ಯಕ್ಕಾಗಿ ಹಲವು ವರ್ಷಗಳಿಂದ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಕಾಸರಗೋಡಿನ ಜನತೆಯನ್ನು ಮುಖ್ಯಮಂತ್ರಿಗಳು ನಿರುತ್ಸಾಹಗೊಳಿಸಬಾರದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು. 

                ಈ ಹಿಂದೆ ಕೇಂದ್ರವನ್ನು ಕೇಳಬೇಕು ಎಂದು ಹೇಳುತ್ತಿದ್ದ ಜಿಲ್ಲೆಯ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಮೌನ ಮುರಿದು ಕಾಸರಗೋಡು ಜನರ ಸಾವು-ಬದುಕಿನ ಹೋರಾಟಕ್ಕೆ ಅಂತ್ಯಹಾಡಕು ಮುಂದಾಗುವಂತೆಯೂ ಆಗ್ರಹಿಸಲಾಯಿತು. 

                               ಒಕ್ಕೂಟ ಪದಾಧಿಕಾರಿಗಳಾದ ಗಣೇಶನ್ ಅರಮಾಂಗನಂ, ಫರೀನಾ ಕೋಟೆ, ತಾಜುದ್ದೀನ್, ಜುಬೇರ್ ಪಡುಪ್, ಅಂಬಲತ್ತರ ಕುಞÂಕೃಷ್ಣನ್.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries