ಕೋಝಿಕ್ಕೋಡ್: ನಟಿ ಹಾಗೂ ರೂಪದರ್ಶಿ ಶಹಾನಾ ಅವರ ಸಾವಿನ ಪ್ರಕರಣದಲ್ಲಿ ಪತಿ ಸಜ್ಜದ್ ಬಂಧನಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯ ಆತನನ್ನು ಮೇ 28ರವರೆಗೆ ರಿಮಾಂಡ್ ಗೆ ಒಳಪಡಿಸಿದೆ. ಕೋಝಿಕ್ಕೋಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಿನ್ನೆ ಈ ಕ್ರಮ ಕೈಗೊಂಡಿದೆ.
ಮೊನ್ನೆ ಪೋಲೀಸರು ಸಜ್ಜದ್ ನನ್ನು ಬಂಧಿಸಿದ್ದರು. ವಿಚಾರಣೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ಸಜ್ಜದ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ರಿಮಾಂಡ್‍ನಲ್ಲಿರುವ ಸಜ್ಜದ್‍ನನ್ನು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಸಜ್ಜದ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪವಿದೆ.
ಸಜ್ಜದ್ ನ ಕ್ರೂರ ಚಿತ್ರಹಿಂಸೆ ತಾಳಲಾರದೆ ಶಹಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವಿಚಾರಣೆ ವೇಳೆ ಸಜ್ಜದ್ ಶಹಾನಾಗೆ ಥಳಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಸಜ್ಜದ್ ಮಾರಣಾಂತಿಕ ಮಾದಕ ವ್ಯಸನಿಯಾಗಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. ಫುಡ್ ಡೆಲಿವರಿ ನೆಪದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ.