ಶಹಜಹಾನ್‌ಪುರ: ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ಸನಾತನ ಧರ್ಮವನ್ನು ಪಾಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸರಿಯಾದ ಶಿಕ್ಷಣವನ್ನು ಕಲಿಸುವ ಮೂಲಕ ಭಾರತದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮತ್ತು ಸನಾತನ ಧರ್ಮ ತತ್ವಗಳನ್ನು ಪುನಃಸ್ಥಾಪಿಸುವ ಅಗತ್ಯವನ್ನು ಶನಿವಾರ ಒತ್ತಿ ಹೇಳಿದರು.
ಶಹಜಹಾನ್ ಪುರ ಪಟ್ಟಣದಲ್ಲಿ ಶಾಲೆಯೊಂದನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ದೇಶದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಾಗಿದೆ. ಸನಾತನ ತತ್ವಗಳನ್ನು ಮರಳಿ ತರಬೇಕು. ಮತ್ತು ಶಿಕ್ಷಣವಿಲ್ಲದೆ ಇದು ಸಾಧ್ಯವಿಲ್ಲ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ವಾಣಿಯನ್ನ ಪ್ರಸ್ತಾಪಿಸುತ್ತಾ, ಮಾನವ ಜೀವನದ ಉದ್ದೇಶ ಜ್ಞಾನದ ಸಾಧನೆ. ಮತ್ತು ವಿನಯವು ಜ್ಞಾನದ ಫಲಿತಾಂಶವಾಗಿದೆ ಎಂದು ಹೇಳಿದರು.
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕಲಾನ್ ಪಟ್ಟಣದಲ್ಲಿ ಶಾಲೆಯೊಂದರ ಉದ್ಘಾಟನೆ ವೇಳೆ ಈ ವಿಷಯ ತಿಳಿಸಿದರು.