HEALTH TIPS

ಪ್ರೇಕ್ಷಕರನ್ನು ವಿಸ್ಮಯಗೊಳಿಸಿದ ಕರ್ಣ: ಲಾಸ್ಯ ಕಲಾಕ್ಷೇತ್ರದ 'ಸೂರ್ಯಪುತ್ರ' ನೃತ್ಯ ರೂಪಕ

          ಕಾಸರಗೋಡು: ರಾಜ್ಯ ಸರ್ಕಾರದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಬಳಿ ನಡೆಯುತ್ತಿರುವ "ನನ್ನ ಕೇರಳ" ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದಲ್ಲಿ ಲಾಸ್ಯ ಕಲಾಕ್ಷೇತ್ರದ ಸೂರ್ಯಪುತ್ರನ್  ನೃತ್ಯ ಪ್ರದರ್ಶನ ಕುತೂಹಲಕರವಾಗಿ ಗಮನ ಸೆಳೆಯಿತು.


                   ಮಹಾಭಾರತದ ಕರ್ಣನ ವೃತ್ತಾಂತವನ್ನು ಒಳಗೊಂಡಿರುವ ನೃತ್ಯ ರೂಪಕ,  ಕರ್ಣ ತನ್ನ ಜೀವನದುದ್ದಕ್ಕೂ ಅನುಭವಿಸಿದ ಅವಮಾನ ಮತ್ತು ಅನ್ಯಾಯವನ್ನು ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ತಿಳಿಸುವಲ್ಲಿ ಯಶಸ್ವಿಯಾಯಿತು. ಕರ್ಣನು ಸೂತನನಾಗಿ ಬೆಳೆದ ಕಾರಣ ಅವನಿಗೆ ಅರ್ಹವಾದ ಕೌಶಲ್ಯ ಮತ್ತು ಸ್ಥಾನಮಾನವನ್ನು ನಿರಾಕರಿಸಲಾಯಿತು. ತನ್ನ ತಾಯಿ ಕುಂತಿಯಿಂದ ಪರಿತ್ಯಕ್ತನಾದ ಸೂರ್ಯಪುತ್ರನನ್ನು ಪಾಂಡವರು ಸೇರಿದಂತೆ ಅವನ ಸಂಬಂಧಿಕರು ಸೂತನ ಮಗನೆಂದು ಪರಿಗಣಿಸಿದರು. ಪಂಚಪಾಂಡವರು ಕೂಡ ಕರ್ಣನನ್ನು ಜಾತೀಯವಾಗಿ ತುಚ್ಛೀಕರಿಸುತ್ತಾರೆ. ಸಮಾಜದಲ್ಲಿ ಅನೇಕ ಕರ್ಣರಿದ್ದಾರೆ ಎಂಬುದನ್ನು ನೃತ್ಯ ರೂಪಕ ಎತ್ತಿ ತೋರಿಸಿತು. ಯುದ್ಧ ಭೂಮಿಯಾದ ಕುರುಕ್ಷೇತ್ರದಲ್ಲಿ ನಿರಾಯುಧ ಕರ್ಣನನ್ನು ಕೊಲ್ಲಲು ಅರ್ಜುನ ನಾಗಾಸ್ತ್ರವನ್ನು ಕಳುಹಿಸುವುದರೊಂದಿಗೆ ನೃತ್ಯವು ಕೊನೆಗೊಳ್ಳುತ್ತದೆ.


                ಯಕ್ಷಗಾನ, ಜಾನಪದ ಕಲೆ, ಕಳರಿಪಯಟ್ ಮೇಳೈಸಿದ ಎರಡೂವರೆ ಗಂಟೆಗಳ ಕಾಲ ಕರ್ಣ ನೃತ್ಯ ರೂಪಕ ಪ್ರದರ್ಶನ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು.  ಲಾಸ್ಯ ಕಲಾಕ್ಷೇತ್ರದ ಅಧೀನದ ಲಾಸ್ಯ ಕಾಲೇಜ್ ಆಫ್ ಫೈನ್ ಆರ್ಟ್‍ನ ಉಪನ್ಯಾಸಕಿ ಕಲಾಮಂಡಲಂ ಲತಾ, ಡಾ.ಆರ್.ರಘುನಾಥ್, ಕಲಾಕ್ಷೇತ್ರ ವಿದ್ಯಾಲಕ್ಷ್ಮಿ, ವಿ.ವೀಣಾ ಅವರೊಂದಿಗೆ ಭರತನಾಟ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸುಮಾರು 15 ಕಲಾವಿದರು ವೇದಿಕೆಯಲ್ಲಿ ಪ್ರದರ್ಶನ ನೀಡಿದರು.  ಹರಿತ ತಂಬಾನ್ ಅವರ ನೃತ್ಯ ಸಂಯೋಜನೆ ಇತ್ತು. ಡಾ. ಎಎಸ್ ಪ್ರಶಾಂತ್ ಕೃಷ್ಣನ್ ರೂಪಕ ಸಿದ್ದಪಡಿಸಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries