ಕಾಸರಗೋಡು: ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಯಾದ ಕೇರಳÀ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (ಕೇರಳ ಇನ್ಸಿಟ್ಯೂಟ್ ಫಾರ್ ಇಂಟರ್ ಪ್ರೆನ್ಶಿಪ್ ಡೆವೆಲಪ್ಮೆಂಟ್- ಕೆಐಇಡಿ), ಉದ್ಯಮಿಗಳ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗೆ ತರಲು ಅಗತ್ಯವಾದ ಕಾರ್ಯವಿಧಾನಗಳು ಮತ್ತು ಸಾಮಥ್ರ್ಯಗಳ ಕುರಿತು ತರಬೇರಿಯ ಮೊದಲ ತಂಡದ ಉದ್ಯಮಶೀಲತಾ ಕಾರ್ಯಾಗಾರ ಮೇ 11 ರಿಂದ 13 ರವರೆಗೆ ಆಯೋಜಿಸಿತ್ತು. ವಿದೇಶಿ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ಉದ್ಯಮಿಗಳಿಗೆ ಈ ತರಬೇತಿ ಮಹತ್ತರ ಮಾರ್ಗನಿರ್ದೇಶನ ನೀಡಿದೆ. ಕೇರಳದ ವಿವಿಧ ಜಿಲ್ಲೆಗಳಿಂದ 38 ಉದ್ಯಮಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ವಿದೇಶಿ ವ್ಯಾಪಾರ ನಿರ್ದೇಶನಾಲಯದ ಜಂಟಿ ನಿರ್ದೇಶಕ ಕೆ.ಎಂ.ಹರಿಲಾಲ್, ಕೇರಳದ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥ ಎಂ.ಸಿ.ರಾಜೀವ್, ಕಸ್ಟಮ್ಸ್‍ನ ನಿವೃತ್ತ ಸಹಾಯಕ ಆಯುಕ್ತ ಜಿ.ಅನಿಲ್‍ಕುಮಾರ್, ಫೆಡರಲ್ ಬ್ಯಾಂಕ್‍ನ ನಿವೃತ್ತ ಸಹಾಯಕ ಮಹಾಪ್ರಬಂಧಕ ಎ.ಮಾಧವನ್ ತರಬೇತಿಯನ್ನು ನಡೆಸಿದರು. ರಫ್ತು ನೇರ ತನಿಖೆ ವಿಭಾಗದ ನಿರ್ದೇಶಕ, ನಿಗಮದ ವ್ಯವಸ್ಥಾಪಕ ಪಟೇಲ್ ಅಭಿಜಿತ್ ಮತ್ತು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಡಾ. ಶೈಸಿ, ಸಹಾಯಕ ನಿರ್ದೇಶಕ ಶ್ರೀಜಿತ್, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಲಹೆಗಾರ್ತಿ ಮನಿಷಾ, ಸಾಂಬಾರ ಮಂಡಳಿ ಉಪ ನಿರ್ದೇಶಕ ಮಣಿಕಂಠನ್, ಕೊಚ್ಚಿ ವಿಶೇಷ ಆರ್ಥಿಕ ವಲಯದ ಸಹಾಯಕ ಅಭಿವೃದ್ಧಿ ಆಯುಕ್ತ ಎಸ್.ಪ್ರಮೋದ್. ಕೆ ಪಿಳ್ಳೈ, ಯು ಆಂಡ್ ಕೋ ಮರೈನ್ ಎಕ್ಸ್‍ಪೆÇೀರ್ಟ್ ವ್ಯವಸ್ಥಾಪಕ ಪಾಲುದಾರ ಜಯನಾಥ್, ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ತರಬೇತುದಾರ ಬೋನಿಫೇಸ್ ಕೊನಾಟ್ ಮತ್ತು ಕೊಚ್ಚಿನ್ ವಿಶ್ವವಿದ್ಯಾಲಯದ ಅತಿಥಿ ಬೋಧಕ ಆಂಥೋಣಿ ಜೋಸೆಫ್ ಮುಂತಾದ ತಜ್ಞರು ಮಾತನಾಡಿದರು. ಮುಂದಿನ ತಂಡದ ತರಬೇತಿ ಆಗಸ್ಟ್ 10,11,12 ರಂದು ನಡೆಯಲಿದೆ.