ಪಾಲಕ್ಕಾಡ್: ಸೈಲೆಂಟ್ ವ್ಯಾಲಿ ಅರಣ್ಯದಲ್ಲಿ ನಾಪತ್ತೆಯಾಗಿರುವ ಅರಣ್ಯ ವೀಕ್ಷಕ ರಾಜನ್‍ಗಾಗಿ ಪೋಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ಫಲಕಾರಿಯಾಗಲಿಲ್ಲ. ನಿನ್ನೆಯೂ ಎರಡು ತಂಡಗಳು ನಡೆಸಿದ ಹುಡುಕಾಟದಲ್ಲಿ ರಾಜನ್ ಪತ್ತೆಯಾಗಿಲ್ಲ.
ನಿನ್ನೆ ಸೈರಂಧ್ರಿ ಅರಣ್ಯ ಮತ್ತು ಮನ್ನಾಕ್ರ್ಕಾಡ್ ತಾತೆಂಗಳ|ಂನಲ್ಲಿ ಶೋಧ ನಡೆಸಲಾಯಿತು. ಥಂಡರ್ ಬೋಲ್ಟ್ ಹಾಗೂ ಪೋಲೀಸರು ಪರಿಶೀಲನೆ ನಡೆಸಿದರು. ವಿಶೇಷ ಅಭಿಯಾನ ವಿಫಲವಾದರೂ ತನಿಖೆ ಮುಂದುವರಿಸಲಾಗುವುದು ಎಂದು ಅಗಳಿ ಡಿವೈಎಸ್ಪಿ ಇದೇ ವೇಳೆ ತಿಳಿಸಿದರು.
ಮೇ 2ರಿಂದ ರಾಜನ್ ನಾಪತ್ತೆಯಾಗಿದ್ದರು. ನಂತರ 39 ಅರಣ್ಯ ವೀಕ್ಷಕರು ಸೇರಿದಂತೆ 52 ಅರಣ್ಯ ಇಲಾಖೆ ನೌಕರರು ಸೈರಂಧ್ರಿ ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಫಲ ಸಿಗಲಿಲ್ಲ. ವಾಚ್ ಟವರ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜನ್ ರಾತ್ರಿ ನಾಪತ್ತೆಯಾಗಿದ್ದರು.