ತಿರುವನಂತಪುರಂ: ಪಿಸಿ ಜಾರ್ಜ್ ಬಂಧನದ ಬಳಿಕ ಪ್ರಕರಣ ದಾಖಲಾಗಿದೆ. ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಬಂಧಿಸಲಾಗಿದೆ. ದ್ವೇಷ ಪ್ರಸಾರ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.
ಅನಂತಪುರಿ ಹಿಂದೂ ಮಹಾಸಮ್ಮೇಳನದಲ್ಲಿ ಪಿಸಿ ಜಾರ್ಜ್ ನೀಡಿದ ದ್ವೇಷ ಭಾಷಣದ ದೂರಿನ ಮೇರೆಗೆ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಪೋರ್ಟ್ ಅಅಸಿ. ಕಮಿಷನರ್ ಪಿಸಿ ಜಾರ್ಜ್ ಅವರನ್ನು ಇಂದು ಮುಂಜಾನೆ ವಶಕ್ಕೆ ತೆಗೆದುಕೊಂಡಿದ್ದರು. ಬೆಳಗ್ಗೆ 5 ಗಂಟೆ ಸುಮಾರಿಗೆ ಎರಟ್ಟುಪೆಟ್ಟಾದಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಯಿತು.
ಟಿಪ್ಪು ಸಂಪೂರ್ಣ ಕೋಮುವಾದಿ, ಆತ ಮುಸ್ಲಿಮೇತರರನ್ನು ಹತ್ಯೆ ಮಾಡಿದ್ದ, ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂಬುದೂ ಸೇರಿದಂತೆ ಕೆಲವು ವಿಷಯಗಳನ್ನು ಪಿಸಿ ಜಾರ್ಜ್ ತೆರೆದಿಟ್ಟಿದ್ದರು.
ಇದೇ ವೇಳೆ ಪಿಸಿ ಜಾರ್ಜ್ ಅವರ ಪುತ್ರ ಶಾನ್ ಜಾರ್ಜ್ ಅವರು ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸಿ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಪಿಸಿ ಜಾರ್ಜ್ ಪೋಲೀಸರಿಗೆ ಹೆದರುವವರಲ್ಲ ಎಂದು ಶಾನ್ ಹೇಳಿದ್ದಾರೆ. ಪೊಲೀಸರು ನೋಟ|ಈಸು ನೀಡಿದ್ದರೆ ಹಾಜರಾಗುತಿದ್ದರು ಎಂದಿರುವರು.