ಕಣ್ಣೂರು: ಪಾಂಡ್ಯಲಮುಕ್ಕಿನಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಗೆ ಪೋಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸಿಪಿಎಂ ಕಾರ್ಯಕರ್ತ ಪುನ್ನೆಲ್ ಹರಿದಾಸನ್ ಹತ್ಯೆ ಪ್ರಕರಣದ ಶಂಕಿತ ಆರೋಪಿ ಸಿಎಂ ಮನೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿರುವುದು ಭಾರೀ ಭದ್ರತಾ ಲೋಪವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಿಎಂ ಮನೆ ಸುತ್ತಲಿನ ರಸ್ತೆ, ಗಲ್ಲಿಗಳ ವಿವರವನ್ನು ಪೋಲೀಸರು ಸಂಗ್ರಹಿಸಿದ್ದಾರೆ. ಈ ಕುರಿತು ವಿವರವಾದ ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಖ್ಯರಸ್ತೆಯಿಂದ ಸಿಎಂ ಮನೆ ಹಿಂಭಾಗದವರೆಗೆ ಕಾರಿಡಾರ್ ಸೇರಿದಂತೆ ಬಡಾವಣೆಗಳಲ್ಲಿ ಸನ್ನದ್ದತೆ ಸಿದ್ಧಪಡಿಸಲಾಗಿದೆ. ಮೊನ್ನೆ ಪೋಲೀಸ್ ತಂಡ ರಸ್ತೆ ಪರಿಶೀಲನೆ ನಡೆಸಿತ್ತು.
ಮೊನ್ನೆ ಡಿಐಜಿ ರಾಹುಲ್ ಆರ್ ನಾಯರ್, ನಗರ ಪೋಲೀಸ್ ಆಯುಕ್ತ ಆರ್ ಇಳಂಗೋ ಮತ್ತು ಹೆಚ್ಚುವರಿ ಆಯುಕ್ತ ಪಿಪಿ ಸದಾನಂದನ್ ಅವರನ್ನೊಳಗೊಂಡ ಪೋಲೀಸ್ ತಂಡ ಪರಿಶೀಲನೆ ನಡೆಸಿತು.
ಮನೆಯ 200 ಮೀಟರ್ ವ್ಯಾಪ್ತಿಯಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಮತ್ತು ಪೋಲೀಸ್ ಕಾವಲು ಇರಲಿದೆ ಎoದು ತಿಳಿದುಬಂದಿದೆ.