ಕಾಸರಗೋಡು: ಹಳಸಿದ ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣದ ಆರೋಪಿ, ಚೆರ್ವತ್ತೂರು ಕೂಲ್ ಬಾರ್ ಮಾಲಿಕ, ಚಂದೇರ ಪಿಲಾವಳಪ್ ನಿವಸಿ ಕುಞಹಮ್ಮದ್ ವಿರುದ್ಧ ಪೊಲೀಸರು ಲುಕೌಟ್ ನೋಟೀಸು ಜಾರಿಗೊಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಐಭವ್ ಸಕ್ಸೇನಾ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಕುಞಹಮ್ಮದ್ 14ದಿವಸಗಳ ಸಂದರ್ಶನ ವಿಸಾ ಮೂಲಕ ವಿದೇಶಕ್ಕೆ ತೆರಳಿದ್ದು, ಊರಿಗೆ ವಾಪಸಾಗುವ ಮಧ್ಯೆ ದೇಶದ ಯಾವುದೇ ವಿಮಾನ ನಿಲ್ದಾಣದಲ್ಲಿ ಬಂದಿಳಿದರೂ ಬಂಧಿಸುವಂತೆ ಪತ್ರದಲ್ಲಿ ಮನವಿಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಕೂಲ್‍ಬಾರ್ ಪ್ರಬಂಧಕ, ಕಾರ್ಮಿಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.