ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ಶ್ರೀಧರ್ಮ ದೈವಗಳ ವಾರ್ಷಿಕ ನೇಮೋತ್ಸವ ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ಸಂಜೆ ಸಾಂಪ್ರದಾಯಿಕ ಪ್ರಾರ್ಥನೆ, ಪೂಜೆ, ತೊಡಂಙಲ್, ಭಂಡಾರ ಹೊgಗಿಟ್ಟು ಬಳಿಕ ಅನ್ನದಾನ ನಡೆಯಿತು. ಬಳಿಕ ಬುಧವಾರ ಮುಂಜಾನೆ ಈರ್ವರು ಉಳ್ಳಾಕ್ಲು ದೈವದ ನೇಮ, ಶ್ರೀಧೂಮಾವತಿ ದೈವಗಳ ನೇಮ ಮತ್ತು ಶ್ರೀಧರ್ಮ ದೈವಗಳ ನೇಮ ಪ್ರಸಾದ ವಿತರಣೆ ನಡೆಯಿತು. ಜೊತೆಗೆ ವಿವಿಧ ಉಪ ದೈವಗಳ ಕೋಲ ನಡೆಯಿತು. ಮಧ್ಯಾಹ್ನ ಅನ್ನ ಪ್ರಸಾದ ನಡೆಯಿತು. ಪುದುಕೋಳಿ ಶ್ರೀಕೃಷ್ಣ ಭಟ್, ಶಂಕರ ಭಟ್, ಗೋವಿಂದ ಭಟ್, ಗಣೇಶ್ ಭಟ್ ನೇತೃತ್ವ ವಹಿಸಿದ್ದರು. ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.