ಕೊಚ್ಚಿ: ಟ್ರಾಫಿಕ್ ಜಾಮ್ ನಿಂದ ಪಾರಾಗಲು ನಟ ಸುರೇಶ್ ಗೋಪಿ ಆಟೋರಿಕ್ಷಾಗಳನ್ನೇ ನೆಚ್ಚಿಕೊಂಡಿದ್ದಾರೆ. ಮೊನ್ನೆ ಸಂಜೆ ಎರ್ನಾಕುಳಂನ ಬಿಟಿಎಚ್ ಹೋಟೆಲ್ ನಲ್ಲಿ ನಡೆದ ವಿಎಚ್ ಪಿ ಸ್ವಾಭಿಮಾನ್ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಕಾಲೂರಿನಿಂದ ಆಟೋರಿಕ್ಷಾದಲ್ಲಿ ಆಗಮಿಸಿದರು. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಈ ವೇಳೆ ಸುರೇಶ್ ಗೋಪಿ ಕಾಲೂರಿನಲ್ಲಿ ತಾರಾ ಸಂಘಟನೆ ‘ಅಮ್ಮ’ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಅಮ್ಮನ ಕಾರ್ಯಕ್ರಮ ಮುಗಿಸಿ ನಾಲ್ಕು ಗಂಟೆಗೆ ಹೊರಟರು. ಆದರೆ ಕಾಲೂರು ಹಾಗೂ ಎಂ.ಜಿ.ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಸುರೇಶ್ ಗೋಪಿ ಆಟೋದಲ್ಲಿ ಪ್ರಯಾಣ ಮುಂದುವರಿಸಿದರು. ಕಾರಿನಲ್ಲಿ ಬರುವ ನಟನ ನಿರೀಕ್ಷೆಯಲ್ಲಿದ್ದ ಸಂಘಟಕರಿಗೆ ಸುರೇಶ್ ಗೋಪಿ ಅಟೋದಲ್ಲಿ ಆಗಮಿಸಿ ಅಚ್ಚರಿ ಮೂಡಿಸಿದರು. ಜೊತೆಗೆ ತನ್ನ ಅಟೋದಲ್ಲಿ ಪ್ರಯಾಣಿಕರಾಗಿದ್ದವರು ಸುರೇಶ್ ಗೋಪಿ ಎಂಬುದು ಅಟೋ ಚಾಲಕನಿಗೆ ಅಷ್ಟರ ವರೆಗೆ ತಿಳಿದಿರಲಿಲ್ಲ. ಆಟೊರಿಕ್ಷಾ ಕಾಲೂರಿನಿಂದ ಬಿಟಿಎಚ್ ತಲುಪಲು ಸುಮಾರು ಅರ್ಧ ಗಂಟೆ ಬೇಕಾಯಿತು.