ಬದಿಯಡ್ಕ: ಮಾನ್ಯ ಶ್ರೀ ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರಂಭ ಮೇ.5 ಮತ್ತು 6ರಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು. ಈ ಸಂದರ್ಭದಲ್ಲಿ ಇಂದು ರಾತ್ರಿ 9 ಗಂಟೆಗೆ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಅವರ ವೈಷ್ಣವಿ ನಾಟ್ಯಾಲಯದ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಜರಗಲಿದೆ. ಶಾಸ್ತ್ರೀಯ ಹಾಗೂ ಜಾನಪದ ನೃತ್ಯಗಳನ್ನೊಳಗೊಂಡ ಕಾರ್ಯಕ್ರಮದಲ್ಲಿ ನಟುವಾಂಗದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್, ಹಾಡುಗಾರಿಕೆಯಲ್ಲಿ ರಾಷ್ಟ್ರಪ್ರಶಸ್ತಿವಿಜೇತ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ವಸಂತ ಕುಮಾರ ಗೋಸಾಡ, ಟಿ.ವಿ.ಗಿರಿ, ಸವಿತಾ ಅವಿನಾಶ್, ಮೃದಂಗದಲ್ಲಿ ವಿದ್ವಾನ್ ಗೀತೇಶ್ ನೀಲೇಶ್ವರ, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ ಕಾಞಂಗಾಡು, ಕೀಬೋರ್ಡ್‍ನಲ್ಲಿ ಬಾಬಣ್ಣ ಪುತ್ತೂರು, ರಿಥಂಪ್ಯಾಡ್‍ನಲ್ಲಿ ಸಚಿನ್ ಪುತ್ತೂರು ಭಾಗವಹಿಸುವರು.
ನಾಳೆ ಬೆಳಿಗ್ಗೆ 10.13 ಕ್ಕೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 2 ರಿಂದ ಮಾಂಬಾಡಿ ಶಿಷ್ಯವೃಂದದಿಂದ ಗಾನ ವೈಭವ, ಸಂಜೆ 6.30 ರಿಂದ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ನಾಟ್ಯನಿಲಯಂ ತಂಡದವರಿಂದ ನಾಟ್ಯ ಸಮ್ಮೋಹನಂ-22, ರಾತ್ರಿ ಧಾರ್ಮಿಕ ಸಭೆ ಹಾಗೂ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.