ಕಾಸರಗೋಡು: ಜಿಲ್ಲೆಯ ಕಾಞಂಗಾಡು ಮತ್ತು ಉದುಮ ವಿಧಾನಸಭಾ ಕ್ಷೇತ್ರಗಳಲ್ಲಿ ಹಸಿವು ಮುಕ್ತ ಕೇರಳ ಯೋಜನೆಯ ಭಾಗವಾಗಿ 20 ರೂ.ಗೆ ಊಟವನ್ನು ನೀಡುವ ಸುಭಿಕ್ಷಾ ಹೋಟೆಲ್ ಗಳನ್ನು ಉದ್ಘಾಟಿಸಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸುಭಿಕ್ಷಾ ಹೋಟೆಲ್‍ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ತೃಕ್ಕರಿಪ್ಪುರದಲ್ಲಿ ಈಗಾಗಲೇ ಹೋಟೆಲ್ ಆರಂಭಕ್ಕೆ ಕಟ್ಟಡವನ್ನು ಗುರುತಿಸಲಾಗಿದೆ. ಕುಟುಂಬಶ್ರೀ ಮತ್ತು ಸಹಕಾರ ಸಂಘಗಳ ಸಹಯೋಗದಲ್ಲಿ ಹೋಟೆಲ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಬೇಡಡ್ಕದಲ್ಲಿ ಜಿಲ್ಲಾ ಯುವ ಸಹಕಾರ ಸಂಘದ ವತಿಯಿಂದ ಆರಂಭವಾದ ಸುಭಿಕ್ಷಾ ಹೋಟೆಲ್ ನ್ನು ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಈ ಯೋಜನೆ ಬಹುಕಾಲ ಮುಂದುವರಿಯಬೇಕು. ಸುಭಿಕ್ಷಾ ಹೋಟೆಲ್ ನಲ್ಲಿ ಉತ್ತಮ ಆಹಾರ ತಯಾರಿಸಿ ವಿತರಿಸಬೇಕು ಎಂದು ಶಾಸಕರು ತಿಳಿಸಿದರು.
ಸಹಕಾರಿ ನಿರೀಕ್ಷಕ, ಯುವ ಸಹಕಾರ ಸಂಘದ ನೋಡಲ್ ಅಧಿಕಾರಿ ಮನೋಜ್ ಕುಮಾರ್, ಬೇಡಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಮಾಧವನ್, ಕುತ್ತಿಕೋಲ್ ಕೃಷಿ ಬ್ಯಾಂಕ್ ಅಧ್ಯಕ್ಷ ಎಂ ಅನಂತನ್, ಬೇಡಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ತಂಬಾನ್, ಬೇಡಡ್ಕ ಗ್ರಾಮ ಪಂಚಾಯಿತಿ ಸದಸ್ಯ ಪಿ. ಶ್ರುತಿ ಮಾತನಾಡಿದರು. ಕಾಸರಗೋಡು ತಾಲೂಕು ಪೂರೈಕೆ ಅಧಿಕಾರಿ ಕೆ.ಪಿ.ಸಾಜಿಮೋನ್ ಸ್ವಾಗತಿಸಿ, ಕಾಸರಗೋಡು ಯುವ ಸಹಕಾರ ಸಂಘದ ಅಧ್ಯಕ್ಷ ಕೆ.ಸುಧೀಶ್ ವಂದಿಸಿದರು.
ಕಾಞಂಗಾಡ್ ನ ಅಲಾಮಿಪಳ್ಳಿಯಲ್ಲಿ ಸುಭಿಕ್ಷಾ ಹೊಟೇಲನ್ನು ಕಾಞಂಗಾಡ್ ನಗರಸಭೆಯ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಕೆ.ವಿ.ಸುಜಾತಾ ಮಾತನಾಡಿ, ಸುಭಿಕ್ಷ ಹೋಟೆಲ್‍ಗಳು ಸಂಕಷ್ಟದಲ್ಲಿರುವವರಿಗೆ ನೆರವಾಗಲಿ ಎಂದು ಹಾರೈಸಿದರು. ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭೆ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಅಹ್ಮದಲಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಅನೀಸನ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಕುಮಾರಿ, ವಾರ್ಡ್ ಕೌನ್ಸಿಲರ್ .ಅಧ್ಯಕ್ಷೆ ಡಿ.ಎಸ್.ಸೂರ್ಯ ಜಾನಕಿ ಮಾತನಾಡಿದರು. ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್.ಬಿಂದು ಸ್ವಾಗತಿಸಿ, ಸಿಡಿಎಸ್ ಉಪಾಧ್ಯಕ್ಷೆ ಕೆ.ವಿ.ಉಷಾ ವಂದಿಸಿದರು.