ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಾಡತ್ತಡ್ಕ ಶ್ರೀ ದೈವಗಳ ಸೇವಾಸಮಿತಿ ಹಾಗೂ ಶ್ರೀ ಹರಿಹರ ಭಜನಾ ಮಂದಿರದ ಮಹಾ ಸಭೆ ಜರಗಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಮಾಡಲಾಯಿತು. ಗೌರವಾಧ್ಯಕ್ಷರಾಗಿ ಚನಿಯ ಮಿಂಚಿನಡ್ಕ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಎಂ ಅಣೆಬೈಲು, ಅಧ್ಯಕ್ಷ ರಮೇಶ್ ಕೇರ, ಉಪಾಧ್ಯಕ್ಷರಾಗಿ ಸುನಿಲ್ ಕುಮಾರ್ ಎ, ಮತ್ತು ಅಶೋಕ ಎ., ಕಾರ್ಯದರ್ಶಿಯಾಗಿ ಶಿವರಾಮ, ಜತೆಕಾರ್ಯದರ್ಶಿಗಳಾಗಿ ಅರಣ್ ಕುಮಾರ್ ಕೇರ ಮತ್ತು ಚಂದ್ರಶೇಖರ ಅಣೆಬೈಲು, ಕಾರ್ಯಕಾರಿ ಸಮಿತಿ ಸತೀಶ ಅಣೆಬೈಲು, ಸುಜನ್ ಕುಮಾರ್ ಮಿಂಚಿನಡ್ಕ, ನಳಿನಾಕ್ಷ ದೇವರಮೆಟ್ಟು, ವೇಣುಗೋಪಾಲ್ ಮಾಡತ್ತಡ್ಕ, ಪ್ರೇಮಲತಾ ಕೇರ, ಗಣೇಶ್ ಮಾಡತ್ತಡ್ಕ, ಶಿವಪ್ರಸಾದ್ ಅಣಬೈಲು, ಉದಯ ಅಣಬೈಲು, ನಾಗೇಶ್ ಅಣಬೈಲು ಇವರನ್ನು ಆಯ್ಕೆ ಮಾಡಲಾಯಿತು.