ಕಾಸರಗೋಡು: ರಸ್ತೆ ಬದಿ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ರತ್ಯೇಕ ಬೂತ್‍ಗಳಲ್ಲಿ ದಾಸ್ತಾನುಗೊಳಿಸಲು ಉತ್ತೇಜಿಸುವ ಮೂಲಕ ಶುಚಿತ್ವದ ಹೊಸ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸಲು ಕಾಞಂಗಾಡು ನಗರಸಭೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಗರಸಭೆಯ ಜನಕೀಯ ಯೋಜನೆಯಲ್ಲಿ ಒಳಪಡಿಸಿ ಶುಚೀಕರಣ ಯೋಜನೆ ಅಂಗವಾಗಿ ನಗರದ 15 ಕೇಂದ್ರಗಳಲ್ಲಿ ಬಾಟಲಿ ಬೂತ್‍ಗಳನ್ನು ಸ್ಥಾಪಿಸಲಾಗಿದೆ.
ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅವರು ಬೂತಿನೊಳಗೆ ಪ್ಲಾಸ್ಟಿಕ್ ಬಾಟಲಿ ನಿಕ್ಷೇಪಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ನಗರಸಭಾ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ವಿ.ಸರಸ್ವತಿ, ಕೆ.ಲತಾ, ಕೆ.ಅನೀಶನ್, ಪಿ.ಅಹ್ಮದಲಿ ಹಾಗೂ ಕಾರ್ಯಾಧ್ಯಕ್ಷ ಟಿ.ವಿ.ಸುಜಿತ್ ಕುಮಾರ್, ಆರೋಗ್ಯ ಮೇಲ್ವಿಚಾರಕ ಅರುಲ್ ಪಿ ಉಪಸ್ಥಿತರಿದ್ದರು.