ಕಾಸರಗೋಡು: ಜನಸಾಮಾನ್ಯರಿಗೂ ಭೂಮಿ ನೀಡುವ ಗುರಿಯೊಂದಿಗೆ ಭೂರಹಿತರಿಲ್ಲದ ಕೇರಳ ಯೋಜನೆಯನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಮತ್ತು ವಸತಿ ಖಾತೆ ಸಚಿವ ಕೆ.ರಾಜನ್ ತಿಳಿಸಿದ್ದಾರೆ. ಅವರು ಗುರುವಾರ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕು ಮಟ್ಟದ ಹಕ್ಕುಪತ್ರ ವಿತರಣಾ ಮೇಳ ಹಾಗೂ ಇ-ಕಚೇರಿಗಳ ಉದ್ಘಾಟನೆಯನ್ನು ಆನ್‍ಲೈನ್‍ಮೂಲಕ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಕಾಸರಗೋಡು ಕಂದಾಯ ವಿಭಾಗೀಯ ಕಚೇರಿ ಮತ್ತು ಕಾಸರಗೋಡು ತಾಲೂಕು ಕಚೇರಿಯನ್ನು ಇ-ಕಚೇರಿಗಳಾಗಿ ಸಚಿವ ಕೆ.ರಾಜನ್ ಘೋಷಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸಿದ್ದರು.
ಕಾಸರಗೋಡು ತಾಲೂಕಿನಲ್ಲಿ 107 ಹಾಗೂ ಮಂಜೇಶ್ವರಂ ತಾಲೂಕಿನಲ್ಲಿ 98 ಪಟ್ಟಾಗಳನ್ನು ವಿತರಿಸಲಾಯಿತು. ಶಾಸಕ ಎ.ಕೆ.ಎಂ.ಅಶ್ರಫ್, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ, ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯೆ ಪಿ.ಖದೀಜಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ರಾಜನ್, ಕುರಿಯಾಕೋಸ್ ಪ್ಲಾಪ್ಪರಂಬಿಲ್, ಮುಹಮ್ಮದ್‍ಕುಞÂ ಕುಟ್ಟಿಯಾನಂ, ಸನ್ನಿ ಅರಮನ, ಮೂಸಾ ಬಿ ಚೆರ್ಕಳ ಉಪಸ್ಥಿತರಿದ್ದರು. ಕಾಞಂಗಾಡು ಅಪರ ಜಿಲ್ಲಾಧಿಕಾರಿ ಡಿಆರ್ ಮೇಘಶ್ರೀ ಸ್ವಾಗತಿಸಿ, ಕಾಸರಗೋಡು ಆರ್‍ಡಿಒ ಅತುಲ್ ಎಸ್ ನಾಥ್ ವಂದಿಸಿದರು.