HEALTH TIPS

ಅಕ್ರಮವಾಗಿ ದೇಶ ಪ್ರವೇಶ: ಚೋಕ್ಸಿ ವಿರುದ್ಧದ ಪ್ರಕರಣ ಕೈಬಿಟ್ಟ ಡೊಮಿನಿಕಾ ಸರ್ಕಾರ

              ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13,500 ಕೋಟಿ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅವರು ಆಂಟಿಗುವಾ ಮತ್ತು ಬಾರ್ಬುಡಾದಿಂದ ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂಬ ಕುರಿತ ಪ್ರಕರಣಗಳನ್ನು ಡೊಮಿನಿಕಾ ಸರ್ಕಾರ ಕೈಬಿಟ್ಟಿದೆ.

                ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂಬ ಚೋಕ್ಸಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಡೊಮಿನಿಕಾ ಸರ್ಕಾರವು ಮೇ 20ರಂದು ಕೈಬಿಟ್ಟಿದೆ ಎಂದು ವಕ್ತಾರರು ತಿಳಿಸಿದ್ದಾರೆ.

                ಆಂಟಿಗುವಾ ಮತ್ತು ಬಾರ್ಬುಡಾದಿಂದ ನಾಪತ್ತೆಯಾಗಿದ್ದ ಚೋಕ್ಸಿ ಅವರನ್ನು ಮೇ ತಿಂಗಳಲ್ಲಿ ಡೊಮಿನಿಕಾ ಪೊಲೀಸರು ಅಕ್ರಮವಾಗಿ ದೇಶ ನುಸುಳಿದ ಆರೋಪದ ಮೇರೆಗೆ ವಶಕ್ಕೆ ಪಡೆದಿದ್ದರು. 51 ದಿನಗಳ ಬಳಿಕ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು. ಈ ಹಂತದಲ್ಲಿ ಚೋಕ್ಸಿ ಅವರನ್ನು ಖಾಸಗಿ ಜೆಟ್ ಮೂಲಕ ಭಾರತಕ್ಕೆ ಕರೆತರಲು ಸಿಬಿಐ ತಂಡ ಮುಂದಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ಆಂಟಿಗುವಾ ಪ್ರಜೆಯಾದ ಚೋಕ್ಸಿ ಅವರನ್ನು ಭಾರತೀಯರಂತೆ ಕಂಡುಬಂದ ವ್ಯಕ್ತಿಗಳು ಅಪಹರಿಸಿ, ಡೊಮಿನಿಕಾಗೆ ಕರೆತಂದಿದ್ದರು ಎಂದು ಚೋಕ್ಸಿ ವಕೀಲರು ವಾದಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries