HEALTH TIPS

ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನೆರವಾಗಲು ಯುಜಿಸಿಯಿಂದ ನಿಯಮ ಸಡಿಲಿಕೆ

                ನವದೆಹಲಿ: ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ನಿಯಮವನ್ನು ಸಡಿಲಗೊಳಿಸಿದೆ.

             ಮುಕ್ತ ವಿಶ್ವವಿದ್ಯಾಲಯದ ಸ್ಥಾಪನೆಗೆ 40 ರಿಂದ 60 ಎಕರೆ ಜಮೀನು ಮೀಸಲಿಡುವ ಅಗತ್ಯವಿಲ್ಲ.  5 ಎಕರೆ ಸಾಕು ಎಂಬ ತಿದ್ದುಪಡಿಯನ್ನು ಯುಜಿಸಿ ಮಾಡಿದೆ.

             ಇನ್ನಷ್ಟು ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯುಜಿಸಿ (ಅನುದಾನಕ್ಕಾಗಿ ಮುಕ್ತ ವಿಶ್ವವಿದ್ಯಾಲಯಗಳ ಅರ್ಹತೆ) ನಿಯಮ-1998ಕ್ಕೆ ತಿದ್ದುಪಡಿ ತರಲಾಗಿದೆ. ಈ ಅಧಿಸೂಚನೆಯನ್ನು ಶುಕ್ರವಾರ ಹೊರಡಿಸಲಾಗಿದೆ.

               'ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಜಮೀನು ಲಭ್ಯತೆ ತೊಡಕಾಗಬಾರದು. ಹಾಗಾಗಿ, ದೂರ ಶಿಕ್ಷಣ ಮತ್ತು ಆನ್‌ಲೈನ್‌ ಶಿಕ್ಷಣ ಒದಗಿಸಲು ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಈ ತಿದ್ದುಪಡಿ ತರಲಾಗಿದೆ. ಇದರಿಂದ ಸಂಸ್ಥೆಗಳು ಹಲವು ಸ್ಥಳಗಳಲ್ಲಿ ದೂರ ಶಿಕ್ಷಣ ಸೌಲಭ್ಯವನ್ನು ವೃದ್ಧಿಗೊಳಿಸಬಹುದು' ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

'ಈ ಹಿಂದೆ ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ 40 ರಿಂದ 60 ಎಕರೆ ಜಮೀನು ಮೀಸಲಿಡಬೇಕಾಗಿತ್ತು. ಇದರಿಂದ ನಗರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ ಸ್ಥಾ‍ಪನೆ ಬಹಳ ಕಠಿಣವಾಗಿತ್ತು' ಎಂದು ಅವರು ಹೇಳಿದ್ದಾರೆ.

              ಕೇಂದ್ರ ಕಾಯ್ದೆಯಡಿ ಸ್ಥಾಪನೆಯಾದ ಮುಕ್ತ ವಿಶ್ವವಿದ್ಯಾಲಯಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries