ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಪೋಷಣೆಯ ಕೆಲಸ ಕನ್ನಡಪರ ಸಂಘ ಸಂಸ್ಥೆಗಳ ಮೂಲಕ ನಡೆದುಬರಬೇಕಾಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ಕಾಸರಗೋಡಿನ ರಂಗ ಚಿನ್ನಾರಿಯ 16ನೇ ವಾರ್ಷಿಕೋತ್ಸವ, ರಂಗ ಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಾಸರಗೋಡು ನಗರಸಭಾಂಗಣದಲ್ಲಿ ಉದ್ಘಾಟಿಸಿ ಅನುಗ್ರಹ ಭಾಷಣ ಮಾಡಿದರು.
ರಂಗ ಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಂಗಳೂರು ಮಹಾನಗರ ಸಂಘ ಚಾಲಕ್ ಸುನಿಲ್ ಆಚಾರ್, ಡಾ. ಅನಂತ ಕಾಮತ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗ ಕಲಾವಿದ ಸುಧಾಕರ ಸಾಲ್ಯಾನ್, ನಿವೃತ್ತ ಬ್ಯಾಂಕ್ ಪ್ರಬಂಧಕ ಶಶಿಕಾಂತ್ ರಾವ್ ಬೇಕಲ್, ಸಂಸ್ಥೆ ನಿರ್ದೇಶಕ ಮನೋಹರ ಶೆಟ್ಟಿ, ಉದಯಕುಮಾರ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ರಂಗಚಿನ್ನಾರಿ ಶ್ರೀ ಕೇಶವಾನಂದ ಭಾರತೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಉಪ್ಪಳ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಪ್ರಮಿಳಾ ಮಾಧವ್ ಅವರಿಗೆ ರಂಗಚಿನ್ನಾರಿ ಪ್ರಶಸ್ತಿ, ಪಾಕಶಾಸ್ತ್ರ ಕ್ಷೇತ್ರದಲ್ಲಿ ಸುದರ್ಶನ್ ಭಟ್ ಬೆದ್ರಾಡಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಶರಣ್ಯ ಕೂಡ್ಲು ಅವರಿಗೆ ರಂಗ ಚಿನ್ನಾರಿ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸವಾಗತಿಸಿದರು. ರಂಗಚಿನ್ನಾರಿ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಕೆ. ಸತ್ಯನಾರಾಯಣ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸಂಜೆ 7ಕ್ಕೆ ಸುರತ್ಕಲ್‍ನ ನಾಟ್ಯಾಂಜಲಿ ಕಲಾ ಅಕಾಡಮಿ ವತಿಯಿಂದ ನಾಟ್ಯ ವೈವಿಧ್ಯ ನಡೆಯಿತು.