ತಿರುವನಂತಪುರ: ಪಿಣರಾಯಿ ವಿಜಯನ್ ಸರ್ಕಾರವು ಕಳೆದ ಆರು ವರ್ಷಗಳ ಸಾಧನೆಗಳೆಂದು ಪ್ರಸ್ತುತಪಡಿಸಿದ ಯೋಜನೆಗಳ ನೈಜತೆಯನ್ನು ಬಿಜೆಪಿ ನಾಯಕ ಸಂದೀಪ್ ವಾಚಸ್ಪತಿ ಬೆಳಕಿಗೆ ತಂದಿದ್ದಾರೆ. ಆಡಳಿತಾತ್ಮಕ ಸಾಧನೆಗಳೆಂದು ಸರ್ಕಾರ ಎತ್ತಿ ಹಿಡಿದ ಬಹುತೇಕ ಯೋಜನೆಗಳು ಕೇಂದ್ರ ಸರ್ಕಾರÀದ ಯೋಜನೆಗಳು ಎಂಬ ಸತ್ಯವನ್ನು ಸಂದೀಪ್ ವಾಚಸ್ಪತಿ ಜನತೆಯ ಮುಂದಿಡುತ್ತಾರೆ.
ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್‍ಗಾಗಿ 2220 ಎಕರೆ ಭೂ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ಹಣ ಮಂಜೂರು ಮಾಡುತ್ತಿದೆ. 2019ರಲ್ಲಿ ಕೇಂದ್ರದ ಒಪ್ಪಿಗೆ ದೊರೆತಿದ್ದರೂ ಇನ್ನೂ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ. ಡಿಸೆಂಬರ್ ವೇಳೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಹೇಳಿದ್ದಾರೆ. ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಯೋಜನಾ ವೆಚ್ಚದ ಅರ್ಧದಷ್ಟು ಹಣವನ್ನು ಕೇಂದ್ರ ನೀಡಲಿದೆ. ಕೇರಳ 1898 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಿದೆ. ಕೇಂದ್ರ ಒಪ್ಪಿಗೆ ನೀಡಿದರೂ ಕೈಗಾರಿಕಾ ಕಾರಿಡಾರ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆ.
ಸಂಪೂರ್ಣ ವಿದ್ಯುದೀಕರಣದ ರಾಜ್ಯ ಸರ್ಕಾರದ ಭರವಸೆಯ ವಾಸ್ತವತೆಯನ್ನು ಸಂದೀಪ್ ತೆರೆದಿಟ್ಟರು. ಕೇಂದ್ರ ಯೋಜನೆಯಾದ ದೀನದಯಾಳ್ ಗ್ರಾಮಜ್ಯೋತಿ ಯೋಜನೆ ಅಡಿಯಲ್ಲಿ ದೇಶದ ಸಂಪೂರ್ಣ ವಿದ್ಯುದೀಕರಣವನ್ನು ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷವೊಂದರಲ್ಲೇ ಕೇಂದ್ರವು 10,475 ಕೋಟಿ ರೂ.ಗಳನ್ನು ವಿದ್ಯುತ್ ಮಂಡಳಿಗೆ ಮಂಜೂರು ಮಾಡಿದೆ ಎಂದರು.
20 ಲಕ್ಷ ಕುಟುಂಬಗಳಿಗೆ ಕೆ-ಪೋನ್ ರಾಜ್ಯ ಸರ್ಕಾರದ ಪ್ರಮುಖ ಭರವಸೆಯಾಗಿತ್ತು.
ಕಳೆದ 6 ವರ್ಷಗಳಿಂದ ಇಂದಿನ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡಿರುವ 17 ಯೋಜನೆಗಳಲ್ಲಿ ಇವು ಕೆಲವು ಮಾತ್ರ. ಇದರೊಂದಿಗೆ ಕಳೆದ 6 ವರ್ಷಗಳಿಂದ ಪಿಣರಾಯಿ ಸರ್ಕಾರಕ್ಕೆ ತನ್ನದೇ ಆದ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಪಿಣರಾಯಿ ಸರ್ಕಾರ ಒಟ್ಟಾರೆ ಸಿಡಿಮದ್ದಿನ ಹೊಗೆಯ ಸ್ಥಿತಿಯಲ್ಲಿದೆ ಎಂದರು.
ಕಂಪನಿಗಳ ತಿರಸ್ಕಾರ, ಮಾಧ್ಯಮಗಳ ಹೊಗಳಿಕೆ ಬಿಟ್ಟರೆ ಕೇರಳಕ್ಕೆ ಅನುಕೂಲವಾಗುವ ಒಂದೇ ಒಂದು ಯೋಜನೆಯೂ ಈವರೆಗೆ ಜಾರಿಯಾಗಿಲ್ಲ. ಸಿಪಿಎಂ ಆಕ್ಷೇಪಿಸದೇ ಇದ್ದಿದ್ದರೆ ನಡೆಯುತ್ತಿದ್ದ ಗೇಲ್ ಯೋಜನೆ ಅನುಷ್ಠಾನವೇ ದೊಡ್ಡ ಸಾಧನೆ ಎಂದು ಕೊಂಡಾಡುತ್ತಾರೆ. ಉಳಿದವು ಕೇಂದ್ರದ ಯೋಜನೆಗಳು ಬೇರೆ ಹೆಸರಿನಲ್ಲಿ ಜಾರಿಯಾಗಿದೆ ಎಂದು ಟೀಕಿಸಿದರು. ‘ನರೇಂದ್ರ ಮೋದಿ ಕೇರಳ ಸರ್ಕಾರದ ಸಂಪತ್ತು’ ಎಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕಲು ಮುಖ್ಯಮಂತ್ರಿ ಸಿದ್ಧರಾಗಬೇಕು ಎಂದು ವ್ಯಂಗ್ಯವಾಡಿದರು.