ಕಾಸರಗೋಡು: ಕರ್ತವ್ಯದಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಯ ಠಾಣಾಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅಭಿನಂದಿಸಿದರು. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ತಮ್ಮ ಕರ್ತವ್ಯದಲ್ಲಿ ಉತ್ತಮ ಸಾಧನೆ ತೋರುವ ಠಾಣಾಧಿಕಾರಿಗಳನ್ನು ಪ್ರತಿ ತಿಂಗಳು ಗುರುತಿಸಿ ಗೌರವಿಸುವ ಕಾರ್ಯ ಜಿಲ್ಲೆಯಲ್ಲಿ ಜಾರಿಯಲ್ಲಿದೆ.
ಜಿಲ್ಲೆಯಲ್ಲಿ ಹೊಸದುರ್ಗ ಠಾಣೆಯ ಎಸ್‍ಎಚ್‍ಒ ಕೆ.ಪಿ ಶೈನ್ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯ ಎಸ್‍ಎಚ್‍ಒ ಎ.ಸಂತೋಷ್ ಕುಮಾರ್ ದ್ವಿತೀಯ ಹಾಗೂ ಬೇಕಲ ಠಾಣೆಯ ಎಸ್‍ಎಚ್‍ಒ ಯು.ಪಿ ವಿಪಿನ್ ತೃತೀಯ ಸಥಾನ ಪಡೆದುಕೊಂಡರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರು ಅರ್ಹರಾದ ಪೊಲೀಸ್ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.