ಕಾಸರಗೋಡು: ನಗರಸಭಾ ಕೃಷಿ ಭವನದ ವತಿಯಿಂದ 'ನಾವೂ ಕೃಷಿಯೆಡೆಗೆ' ಯೋಜನೆಯ ನಗರಸಭಾ ಮಟ್ಟದ ಕಾರ್ಯಕ್ರಮ ನೆಲ್ಲಿಕುಂಜೆ ತೋಟತ್ತಿಲ್ ತರವಾಡ್ ವಠಾರದಲ್ಲಿ ಜರುಗಿತು. ಶಾಸಕ ಎನ್. ಎ. ನೆಲ್ಲಿಕುನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾಧ್ಯಕ್ಷ ವಿ. ಎಂ. ಮುನೀರ್ ಅಧ್ಯಕ್ಷತೆ ವಹಿಸಿದ್ದರು.
'ಆತ್ಮ ಪೆÇ್ರಜೆಕ್ಟ್' ನಿರ್ದೇಶಕ ಟಿ. ಸುಶೀಲ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪ್ರಿನ್ಸಿಪಲ್ ಕೃಷಿ ಅಧಿಕಾರಿ ಆರ್. ವೀಣಾರಾಣಿ ತರಕಾರಿ ಸಸಿಗಳನ್ನು ವಿತರಿಸಿದರು. ಕೃಷಿ ಅಧಿಕಾರಿ ಕೆ. ಎನ್. ಜ್ಯೋತಿ ಕುಮಾರಿ ಪ್ರತಿಜ್ಞೆ ಬೋಧಿಸಿದರು. ನಗರಸಭಾ ಉಪಾಧ್ಯಕ್ಷೆ ಶಂಸೀದ ಫಿರೋಸ್, ನಗರ ಸಭಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ಕಾಲಿದ್ ಪಚ್ಚಕ್ಕಾಡ್, ಸಿಯಾನ ಹನೀಫ್, ಕೆ. ರಜನಿ, ಕೃಷಿ ನಿರ್ದೇಶಕ ಸೆಲೀನಮ್ಮ, ನಗರ ಸಭಾ ಕಾರ್ಯದರ್ಶಿ ಎಸ್. ನಾಗರಾಜ ಉಪಸ್ಥಿತರಿದ್ದರು. ಈ ಸಂದರ್ಭ ಕೆ. ಎ. ಮುಹಮ್ಮದ್ ಬಶೀರ್, ಶ್ರೀ ಗುರು ಕೃಷಿ ಸಂಘದ ಪದಾಧಿಕಾರಿಯನ್ನು ಗೌರವಿಸಲಾಯಿತು. ಸ್ಥಾಯೀ ಸಮಿತಿ ಅಭಿವೃದ್ಧಿ ಅಬ್ಬಾಸ್ ಬೀಗಂ ಸ್ವಾಗತಿಸಿದರು. ನಗರ ಸಭೆ ಕೃಷಿ ಅಧಿಕಾರಿ ಎಂ. ಪಿ. ಶ್ರೀಜ ವಂದಿಸಿದರು.