ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಸಂಸ್ಥಾಫನಾ ದಿನಾಚರಣೆ ಮೇ 5ರಂದು ಮಧ್ಯಾಹ್ನ 2,30ಕ್ಕೆ ಬೀರಂತಬೈಲ್ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಲ್ಲಿ ಜರುಗಲಿದೆ.
ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ, ವಕೀಲ ಎನ್.ಕೆ ಮೋಹನ್‍ದಾಸ್ ಸಮಾರಂಭ ಉದ್ಘಾಟಿಸುವರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು. ಅರ್ಥಧಾರಿ, ಹಿರಿಯ ಶಿಕ್ಷಕ ರಾಜಾರಾಮ್ ಟಿ ಹಾಗೂ ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಉಪನ್ಯಾಸ ನೀಡುವರು. ಈ ಸಂದರ್ಭ ನಡೆಯುವ ಕವಿಗೋಷ್ಠಿಯಲ್ಲಿ ಬಾಲಮಧುರಕಾನನ ಅಧ್ಯಕ್ಷತೆ ವಹಿಸುವರು. ಕವಿಗಳು ಸ್ವರಚಿತ ಕವನವಾಚನ ನಡೆಸುವರು. ಕಾರ್ಯಕ್ರಮದ ಅಂಗವಾಗಿ ಸಂಗೀತ ಶಿಕ್ಷಕಿ ಹರಿಣಾಕ್ಷಿ ಅವರಿಂದ ನಾಡಗೀತೆ ಕಾರ್ಯಕ್ರಮ ಜರುಗಲಿದೆ.