ಕಣ್ಣೂರು: ಹೋಟೆಲ್ ಧ್ವಂಸ ಖಂಡಿಸಿ ಪ್ರತಿಭಟನೆ ನಡೆಸಿದ ಕುಟುಂಬಶ್ರೀ ಕಾರ್ಯಕರ್ತರು ಕಣ್ಣೂರು ಪಾಲಿಕೆ ಮೇಯರ್ ಟಿ.ಓ.ಮೋಹನನ್ ಅವರನ್ನು ಅವರ ಕಚೇರಿ ಎದುರು ತಡೆದು ಬಟ್ಟೆ ಬಿಚ್ಚಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾ ನಿರತರನ್ನು ಬಲಪ್ರಯೋಗಿಸಿ ಬಂಧಿಸಿ ಬಳಿಕ ಮೇಯರ್ ಅವರಿಗೆ ಕಚೇರಿಗೆ ತೆರಳಲು ಅನುವುಮಾಡಿದರು.
ಇದೇ ವೇಳೆ ಪ್ರತಿಭಟನಾಕಾರರು ಹಾಗೂ ಮಹಿಳಾ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ನಂತರ ಪ್ರತಿಭಟನಾಕಾರರನ್ನು ಕೋಳ ತೊಡಿಸಿ ವಾಹನದಲ್ಲಿ ಕರೆದೊಯ್ದರು.
ಕುಟುಂಬಶ್ರೀ ಕಾರ್ಯಕರ್ತರು ಹಾಗೂ ಇಬ್ಬರು ವಿರೋಧ ಪಕ್ಷದ ಮಹಿಳಾ ನಾಯಕಿಯರ ಮೇಲೆ ಅವಮಾನ ಮತ್ತು ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಮೇಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕುಟುಂಬಶ್ರೀ ಕಾರ್ಯಕರ್ತೆಯರಾದ ಎನ್.ಕೆ.ಶ್ರೀಜಾ (53), ಆರ್.ಪ್ರಸೀತಾ (43), ಎ.ಪಿ.ರಮಣಿ (66), ಕೆ.ಕಮಲಾಕ್ಷಿ (58) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.