ನವದೆಹಲಿ: ದೇಶದ ಅತಿದೊಡ್ಡ ಡ್ರೋಣ್ ಉತ್ಸವ 'ಭಾರತ್ ಡ್ರೋಣ್ ಮಹೋತ್ಸವ 2022'ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಚಾಲನೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಡ್ರೋಣ್ ಮಹೋತ್ಸವ 2022ಕ್ಕೆ ಪ್ರಧಾನಿ ಮೋದಿಯವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸೇನಾಪಡೆಗಳು, ಸಾರ್ವಜನಿಕ ವಲಯದ ಉದ್ಯಮಿಗಳು, ಖಾಸಗಿ ಕಂಪನಿಗಳು ಹಾಗೂ ಡ್ರೋನ್ ಸ್ಟಾರ್ಟಪ್ ಪಾಲ್ಗೊಂಡಿದ್ದಾರೆ.
ಡ್ರೋಣ್ ಗಳನ್ನು ಪ್ರಸ್ತುತ ಕಣ್ಗಾವಲು, ನಿರ್ಣಾಯಕ ಸ್ವತ್ತುಗಳ ತಪಾಸಣೆ ಮತ್ತು ಮೇಲ್ವಿಚಾರಣೆ, ಸಮೀಕ್ಷೆಗಳಿಗೆ ಬಳಸಲಾಗುತ್ತಿದೆ. ಇದರೊಂದಿಗೆ ರಕ್ಷಣೆ ಮತ್ತು ಆಂತರಿಕ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಉಪಯೋಗ, ದೂರ ಸಂಪರ್ಕ, ಭೌಗೋಳಿಕ ಸಮೀಕ್ಷೆ, ಗಣಿಗಾರಿಕೆ, ನಿರ್ಮಾಣ ಮತ್ತು ಸಾರಿಗೆಯಂತಹ ಅನೇಕ ಕಾರ್ಯಗಳಿಗೂ ಡ್ರೋಣ್ ಬಳಕೆ ಮಾಡಲಾಗುತ್ತಿದೆ.
ಇತ್ತೀಚೆಗೆ ಪ್ರಧಾನಿ ಮೋದಿಯವರು ದೇಶದ ವಿವಿಧ ಭಾಗದ ಕೃಷಿ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು 100 ಕಿಸಾನ್ ಡ್ರೋಣ್ ಗಳಿಗೆ ಚಾಲನೆ ನೀಡಿದ್ದರು.
ಡ್ರೋಣ್ ಗಳನ್ನು ವಿಶೇಷವಾಗಿ ಕೃಷಿಯಲ್ಲಿ ಗೊಬ್ಬರ ಹಾಗೂ ಕೀಟನಾಶಕ ಸಿಂಡಪಣೆಗೆ, ಬೆಳೆಗಳ ಮೌಲ್ಯಮಾಪನ, ಬೆಳೆ ಸಾಗಾಮಿಕೆ, ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿಯೂ ಬಳಕೆ ಮಾಡಲಾಗುತ್ತಿದೆ.