ತಿರುವನಂತಪುರ: ಸರ್ಕಾರ ಪಿಸಿ ಜಾರ್ಜ್ ಗೆ ಸಂಬಂಧಿಸಿ ಇಬ್ಬಗೆ ಧೋರಣೆ ತೋರಿಸುತ್ತಿದೆ ಎಂದು ಬಿಜೆಪಿ ಪುನರುಚ್ಚರಿಸಿದೆ. ತೃಕ್ಕಾಕರ ಉಪಚುನಾವಣೆಗೂ ಮುನ್ನ ಪಿ.ಸಿ.ಜಾರ್ಜ್ ಅವರನ್ನು ಬಂಧಿಸುವ ಭರವಸೆಯಂತೆಯೇ ಸರ್ಕಾರದ ನಡೆ ಇದೆ. ಜಾರ್ಜ್ ವಿರುದ್ಧದ ಕ್ರಮ ಸ್ಕ್ರಿಪ್ಟ್‍ನ ಭಾಗವೇ ಎಂಬ ಅನುಮಾನವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದರು.
ಪಿ.ಸಿ.ಜಾರ್ಜ್ ಬಂಧನವು ತೃಕ್ಕಾಕರ ಶೇ.20 ರಷ್ಟು ಮತವನ್ನು ಗುರಿಯಾಗಿಸಿಕೊಂಡು ಸರ್ಕಾರದ ರಾಜಕೀಯ ನಡೆ ಇದೆ. ಕೋಮು ರಾಜಕಾರಣಕ್ಕೆ ಬಲಿಯಾಗಿದ್ದಾರೆ ಎಂದು ಸುರೇಂದ್ರನ್ ಹೇಳಿದರು. ಕೇರಳದಲ್ಲಿ ಪಿಸಿ ಜಾರ್ಜ್ ಬಂಧನಕ್ಕೂ ಮುನ್ನವೇ ಬಂಧನವಾಗಬೇಕಿದ್ದ ಅನೇಕ ಜನರಿದ್ದಾರೆ. ಎರ್ನಾಕುಳಂ ತೋಪುಂಪಾಡಿಯಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ನರಮೇಧ ಮಾಡುತ್ತೇನೆ ಎಂದು ಘೋಷಣೆಗಳನ್ನು ಕೂಗಿದ ಪುಟ್ಟ ಬಾಲಕನಿದ್ದಾನೆ. ಆದರೆ ಮಗುವಿನ ಪೋಷಕರನ್ನು ಅಥವಾ ಮಗುವಿನೊಂದಿಗೆ ಕೊಲೆ ಘೋಷಣೆ ಕೂಗಿದವರನ್ನು ವಶಕ್ಕೆ ತೆಗೆದುಕೊಳ್ಳಲು ಪೋಲೀಸರು ಸಿದ್ಧರಿಲ್ಲ. ಪಿಸಿ ಜಾರ್ಜ್ ವಿರುದ್ಧ ಕೈಗೊಂಡಿರುವ ಕ್ರಮ ಮಾತ್ರ ಅತ್ಯಂತ ಅನ್ಯಾಯವಾಗಿದೆ. ಎಡ ಸರಕಾರ ದ್ವಿ ಮುಖ ನ್ಯಾಯವನ್ನು ಜಾರಿಗೊಳಿಸುತ್ತಿದೆ ಎಂದು ಸುರೇಂದ್ರನ್ ಆರೋಪಿಸಿರುವರು.
ಪಿಸಿ ಜಾರ್ಜ್ ವಿಚಾರದಲ್ಲಿ ವೋಟ್ ಬ್ಯಾಂಕ್ ಗುರಿಯಾಗಿಸಿ ಈ ನಡೆ ನಡೆದಿದೆ. ದೇಶದ್ರೋಹಿಗಳು ಮತ್ತು ಭಯೋತ್ಪಾದಕರು ಮಾತ್ರ ಈ ಕ್ರಮದಿಂದ ಸಂತೋಷಪಡುತ್ತಾರೆ. ಅಂಥವರಿಗೆ ಸರ್ಕಾರ ಭರವಸೆ ನೀಡಿತ್ತು. ತೃಕ್ಕಾಕರ ಉಪಚುನಾವಣೆಗೂ ಮುನ್ನ ಪಾಪ್ಯುಲರ್ ಫ್ರಂಟ್ ಗೆ ನೀಡಿದ ಭರವಸೆ ಪಿ.ಸಿ.ಜಾರ್ಜ್ ಅವರನ್ನು ಹಿಡಿದು ಒಳಗೆ ಹಾಕುವುದಾಗಿತ್ತು. ಅದು ಸರ್ಕಾರದಿಂದ ಸಾಕಾರಗೊಂಡಿದೆ ಎಮದವರು ಹೇಳಿದರು.
ಎಲ್ಲಾ ಕೋಮುವಾದಗಳು ಅಪಾಯಕಾರಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆದರೆ ಕೇರಳದಲ್ಲಿ ಮುಸ್ಲಿಂ ಕೋಮುವಾದವು ಸರ್ಕಾರಕ್ಕೆ ಅಪಾಯಕಾರಿಯಾಗಿ ಕಾಣುತ್ತಿಲ್ಲ. ಸರಕಾರ ಮುಸ್ಲಿಂ ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.