ಕೊಚ್ಚಿ: ನಟ ವಿಜಯ್ ಬಾಬು ವಿಚಾರವಾಗಿ "ಅಮ್ಮ"(ಚಲನಚಿತ್ರ ಕಲಾವಿದರ ಸಂಘಟನೆ) ದೊಂದಿಗೆ ತೀವ್ರ ವಾಗ್ವಾದ ನಡೆದಿರುವ ಹಿನ್ನೆಲೆಯಲ್ಲಿ ನಟಿ ಮಾಲಾ ಪಾರ್ವತಿ ನಟ ಸಿದ್ದಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯ್ ಬಾಬು ಸಮಸ್ಯೆಯಿಂದ ಆಂತರಿಕ ದೂರು ಸಮಿತಿಗೆ ರಾಜೀನಾಮೆ ನೀಡಿದ ನಂತರ ನಟಿ ಸಿದ್ದಿಕ್ ವಿರುದ್ಧ ಆರೋಪ ವ್ಯಕ್ತಪಡಿಸಿರುವರು.
ಹ್ಯಾಪಿ ಸರ್ದಾರ್ ಸಿನಿಮಾದ ಶೂಟಿಂಗ್ ಸ್ಥಳದಲ್ಲಿ ತನಗೆ ಕೆಟ್ಟ ಅನುಭವವಾಗಿದೆ ಎನ್ನುತ್ತಾರೆ ಮಾಲಾ ಪಾರ್ವತಿ. ಹ್ಯಾಪಿ ಸರ್ದಾರ್ ಸಿನಿಮಾದ ಸೆಟ್ ನಲ್ಲಿ ಸಿದ್ದಿಕ್ ಅವರಿಂದ ದುಃಖದ ಅನುಭವವಾಗಿದೆ. ಅವರ ನಿಲುವಿನಿಂದಾಗಿ ನಾನು ಸ್ವಲ್ಪ ಹೆಚ್ಚು ಅಸಮಾಧಾನಗೊಂಡಿದ್ದೇನೆ. ಇವರೆಲ್ಲ ಇರುವಾಗ ಅಮ್ಮ ಸಂಘಟನೆ ಮೇಲೆ ಭರವಸೆ ಇಲ್ಲ ಎಂದು ಮಾಲಾ ಪಾರ್ವತಿ ಹೇಳಿದರು.
ಈ ಘಟನೆಗೆ ಸಂಬಂಧಿಸಿದಂತೆ ಮಾಲಾ ಪಾರ್ವತಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಚಿತ್ರದ ನಿರ್ಮಾಪಕರ ಖಜಾಂಜಿ ಮಾಲಾ ಪಾರ್ವತಿಯ ಹೆಸರು ಉಲ್ಲೇಖಿಸದೆ ತಮ್ಮ ಲೊಕೇಶನ್ ನಲ್ಲಿ ಓರ್ವೆ ಅಮ್ಮ ನಟಿ(ಮುದುಕಿ) ಎಂದಿರುವ ಬಗ್ಗೆ ಮಾಲಾ ಪಾರ್ವತಿ ಪೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.