ಬದಿಯಡ್ಕ: ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಎಡನೀರು ನೇತೃತ್ವವದಲ್ಲಿ ಮೇ.11 ರಿಂದ 15ರ ವರೆಗೆ 10 ರಿಂದ 16ರ ಹರೆಯದ ಮಕ್ಕಳಿಗಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಕನ್ನಡ ಸಂಸ್ಕøತಿ ಶಿಬಿರವನ್ನು ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ವಠಾರದಲ್ಲಿ ಆಯೋಜಿಸಲಾಗಿದೆ. ಸುಗಮ ಸಂಗೀತ, ಭಜನೆ, ಸಮೂಹ ಗಾಯನ, ಮುಖವಾಡ ತಯಾರಿ, ಕಸೂತಿ, ಕರಕುಶಲ ವಸ್ತುಗಳ ತಯಾರಿ, ಯೋಗ, ಗ್ರಾಮೀಣ ಆಟಗಳು, ವಿಜ್ಞಾನ, ಸಾಹಿತ್ಯ ಚಟುವಟಿಕೆಗಳ ಮಾರ್ಗದರ್ಶನ ಶಿಬಿರದಲ್ಲಿ ನೀಡಲಾಗುತ್ತದೆ. ಉಚಿತವಾಗಿ ನಡೆಯುವ ಶಿಬಿರ ಹೆಚ್ಚಿನ ಮಾಹಿತಿಗೆ ಆಸಕ್ತರು 9447375191 ಸಂಖ್ಯೆಗೆ ಸಂಪರ್ಕಿಸಬಹುದು.