ತ್ರಿಶೂರ್: ಭಾರೀ ಮಳೆಯಿಂದಾಗಿ ತ್ರಿಶೂರ್ ಪೂರಂ ಸಿಡಿಮದ್ದು ಪ್ರದರ್ಶನ ಮುಂದೂಡಲಾಗಿದೆ. ತ್ರಿಶೂರ್ ನಗರ ಮತ್ತು ಸುತ್ತಮುತ್ತ ಭಾರೀ ಮಳೆಯ ಹಿನ್ನೆಲೆಯಲ್ಲಿ ಪರಮೇಕಾವು-ತಿರುವಂಬಾಡಿ ದೇವಸ್ಥಾನಗಳು ಈ ತೀರ್ಮಾನ ಪ್ರಕಟಿಸಿವೆ. ಹವಾಮಾನದ ಮೇಲೆ ನಿಗಾ ಇರಿಸಿ ಬಳಿಕ ಸಿಡಿಮದ್ದು ಪ್ರದರ್ಶನ ನಡೆಸಲಾಗುವುದು ಎಂದು ತಿಳಿದುಬಂದಿದೆ.
ವಡಕ್ಕುಂನಾಥ ದೇವಸ್ಥಾನ ಮೈದಾನದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಸಿಡಿಮದ್ದು ಪ್ರದರ್ಶನ(ಬೆಡಿ ಸೇವೆ) ನಡೆಯಬೇಕಿತ್ತು. ಪೂರಂ ದಿನ ಬೆಳಗ್ಗೆ ಸ್ವಲ್ಪ ಮಳೆ ಸುರಿದಿತ್ತು. ನಂತರ ಸಂಜೆ ಸಮಾರಂಭದ ವೇಳೆ ಮತ್ತೆ ಮಳೆ ಸುರಿಯಿತು. ಆದರೆ ವಡಕ್ಕುನಾಥ ಉತ್ಸವ ವೀಕ್ಷಿಸಲು ಆಗಮಿಸಿದ್ದ ನೂರಾರು ಮಂದಿ ಮಳೆಯ ನಡುವೆಯೇ ನಡೆದು ವರ್ಣರಂಜಿತ ಮೆರವಣಿಗೆಗೆ ಮನಸೋತರು.
ಎರಡು ವರ್ಷಗಳ ನಂತರ ತ್ರಿಶೂರ್‍ಗೆ ಬಂದ ಸಾವಿರಾರು ಜನರು ಪೂರಂ ಆಚರಿಸಿದರು. ಪ್ರತಿಯೊಂದು ಪೂರ್ವ ಸಮಾರಂಭಗಳು ಹಿಂದಿನ ವರ್ಷಕ್ಕಿಂತ ಅದ್ಧೂರಿಯಾಗಿ ನಡೆದವು. ಆದರೆ ಗಮನಾರ್ಹ ಬೆಡಿಸೇವೆ ಮಳೆಯಿಂದಾಗಿ ಮುಂದೂಡಲ್ಪಟ್ಟಿತು. ಕಳೆದ ವರ್ಷವೂ ಇದೇ ರೀತಿ ಮಳೆ ಸುರಿದಿದ್ದರಿಂದ ಪ್ರದರ್ಶನ ಮುಂದೂಡಲಾಗಿತ್ತು. ಈ ವರ್ಷವೂ ಇದು ಪುನರಾವರ್ತನೆಯಾಗಿದೆ.