ನವದೆಹಲಿ: ಕೋವಿಡ್ ಪೂರ್ವ ಹಾಗೂ ನಂತರದಿಂದ ಇದೇ ವರ್ಷದ ಮಾರ್ಚ್ 31ರವರೆಗೂ ಗಂಗಾ ನದಿ ತಟದಲ್ಲಿ ಹೂಳಲಾದ ಕೋವಿಡ್ ಮೃತದೇಹಗಳು ಅಲ್ಲದೇ, ನದಿಯಲ್ಲಿ ತೇಲಲ್ಪಟ್ಟ ಮೃತದೇಹಗಳ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡುವಂತೆ ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನ ನೀಡಿದೆ.
ಈ ಕುರಿತು ವಾಸ್ತವ್ಯ ಪರಿಷ್ಕೃತ ವರದಿಯನ್ನು ಸಲ್ಲಿಸುವಂತೆ ಉತ್ತರ ಪ್ರದೇಶ ಹಾಗೂ ಬಿಹಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಹಾಗೂ ಹೆಚ್ಚುವರಿ ಮುಖ್ಯ, ಪ್ರಧಾನ ಕಾರ್ಯದರ್ಶಿಗಳಿಗೆ (ಆರೋಗ್ಯ) ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಹಾಗೂ ತಜ್ಞರ ಸಮಿತಿ ಸದಸ್ಯ ಡಾ. ಅಫ್ರೋಜ್ ನಿರ್ದೇಶಿಸಿದ್ದಾರೆ.
ಕೋವಿಡ್ ಬರುವ ಮುಂಚೆ ಹಾಗೂ ಕೋವಿಡ್ ನಂತರ ಅಂದರೆ ಮಾರ್ಚ್ 2022ರವರೆಗೂ ಗಂಗಾ ನದಿ ತಟದಲ್ಲಿ ಎಷ್ಟು ಮೃತದೇಹಗಳನ್ನು ಹೂಳಲಾಗಿದೆ ಮತ್ತು ತೇಲಲ್ಪಟ್ಟ ಮೃತದೇಹಗಳ ಸಂಖ್ಯೆ, ಎಷ್ಟು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ಹಣಕಾಸು ನೆರವು ನೀಡಲಾಗಿದೆ. ನದಿ ತಟದಲ್ಲಿ ಮೃತದೇಹ ಹೂಳಲು ಹಾಗೂ ನದಿಯಲ್ಲಿ ಮೃತದೇಹ ಎಸೆಯದಂತೆ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಕೋವಿಡ್ ಮೃತದೇಹ ನಿರ್ವಹಣೆ ಮಾರ್ಗಸೂಚಿ ಉಲ್ಲಂಘನೆಗಾಗಿ ಯಾರ ಮೇಲಾದರೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆಯೇ ಎಂಬುದರ ಬಗ್ಗೆ ನ್ಯಾಯಾಧೀಕರಣ ಮಾಹಿತಿ ಬಯಸಿದೆ.