HEALTH TIPS

ಮಧುಮೇಹವಿಲ್ಲದಿದ್ದರೂ ಇಂಥವರ ರಕ್ತದಲ್ಲಿ ಸಕ್ಕರೆಯಂಶ ಅಧಿಕವಿರುತ್ತದೆ

 ದೇಹದಲ್ಲಿ ಸಕ್ಕರೆಯಂಶ ಅಂದರೆ ಹೈಪರ್‌ಗ್ಲೈಸೆಮಿಯಾ ರಕ್ತದಲ್ಲಿ ಗ್ಲುಕೋಸ್‌ ಹೆಚ್ಚಾದರೆ ಉಂಟಾಗುವುದು. ದೇಹದ ರಕ್ತದಲ್ಲಿ ಸಕ್ಕರೆಯಂಶ ಟೈಪ್‌ 1, ಟೈಪ್‌ 2 ಇರುವವರಿಗೆ ಮಾತ್ರವಲ್ಲ ಬೇರೆ ಸಮಸ್ಯೆ ಇರುವವರಲ್ಲಿಯೂ ಕಂಡು ಬರಬಹುದು.

ನಿಮಗೆ ಮಧುಮೇಹವಿರಲಿ, ಇಲ್ಲದಿರಲಿ ರಕ್ತದಲ್ಲಿ ಸಕ್ಕರೆಯಂಶ ಸಮತೋಲದಲ್ಲಿ ಇಡುವುದು ತುಂಬಾನೇ ಅವಶ್ಯಕವಾಗಿದೆ. ಏಕೆಂದರೆ ರಕ್ತದಲ್ಲಿ ಸಕ್ಕರೆಯಂಶ ಅಧಿಕವಾದರೆ ನರಗಳು, ರಕ್ತನಾಳಗಳು, ದೇಹದ ಅಂಗಾಗಳಾದ ಕಣ್ಣು, ಕಿಡ್ನಿ ಇವುಗಳಿಗೆ ಹಾನಿಯುಂಟಾಗುವುದು. ರಕ್ತನಾಳಗಳಿಗೆ ಹಾನಿಯುಂಟಾದರೆ ಹೃದಯಾಘಾತ, ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚು.

ದೇಹಕ್ಕೆ ಗ್ಲುಕೋಸ್‌ ಕಾರ್ಬೋಹೈಡ್ರೇಟ್ಸ್‌ ತಿನ್ನುವುದರಿಂದ ದೊರೆಯುತ್ತದೆ, ದೇಹಕ್ಕೆ ಗ್ಲುಕೋಸ್‌ ಕೂಡ ತುಂಬಾನೇ ಮುಖ್ಯ ಏಕೆಂದರೆ ಶೇ.50-80ರಷ್ಟು ಗ್ಲುಕೋಸ್‌ ಕಿಡ್ನಿ ಹಾಗೂ ಮೆದುಳಿಗೆ ಹಾಗೂ ಕೆಂಪು ರಕ್ತಕಣಗಳಿಗೆ ಬೇಕಾಗುತ್ತದೆ. ಇದು ಲಿವರ್‌ ಹಾಗೂ ಸ್ನಾಯುಗಳಲ್ಲಿ ಶೇಖರವಾಗುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಇನ್ಸುಲಿನ್‌ ಹಾರ್ಮೋನ್‌ ರಕ್ತದಲ್ಲಿ ಸಕ್ಕರೆಯಂಶದ ಸಮತೋಲನವನ್ನು ಕಾಪಾಡುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ರಕ್ತದಲ್ಲು ಸಕ್ಕರೆಯಂಶ 80-100 mg/dLನಲ್ಲಿರುತ್ತದೆ. ಯಾವಾಗ ರಕ್ತದಲ್ಲಿ ತುಂಬಾ ಗ್ಲುಕೋಸ್‌ ಇರುತ್ತದೋ ಆಗ ಸಕ್ಕರೆಯಂಶ ಹೆಚ್ಚಾಗುವುದು.

        ಈ ಬಗೆಯ ಆರೋಗ್ಯ ಸಮಸ್ಯೆ ಇರುವವರಲ್ಲಿ ಮಧುಮೇಹ ಇಲ್ಲದಿದ್ದರೂ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಬಹುದು:

ಕ್ಯೂಸಿಂಗ್ ಸಿಂಡ್ರೋಮ್‌ (Cushing’s Syndrome) 

 ಪಿಟ್ಯುಟರಿ ಗ್ರಂಥಿ ಅಡ್ರಿನೊಕಾರ್ಟಿಕೊಟ್ರೋಪಿಕ್ ಹಾರ್ಮೋನ್‌ಗಳನ್ನು ಅತೀ ಹೆಚ್ಚು ಉತ್ಪಾನೆ ಮಾಡುವುದಕ್ಕೆ ಕ್ಯೂಸಿಂಗ್‌ ಸಿಂಡ್ರೋಮ್‌ ಎಂದು ಕರೆಯಲಾಗುವುದು. ಕಾರ್ಟಿಕೊಸ್ಟೆರಾಯ್ಡ್ ಔಷಧ ತುಂಬಾ ಸಮಯದಿಂದ ಬಳಸುತ್ತಿರುವವರಲ್ಲಿ ಶೇ.70ರಷ್ಟು ಜನರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತೆ. ಕಾರ್ಟಿಸೋಲ್‌ ಎಂಬ ಹಾರ್ಮೋನ್‌ ರಕ್ತದಿಂದ ಗ್ಲುಕೋಸ್‌ ಹೀರಿಕೋಲ್ಳಲು ಇನ್ಸುಲಿನ್‌ಗೆ ತಡೆಯೊಡ್ಡುತ್ತದೆ. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು.

ಪ್ಯಾಂಕ್ರಿಯಾಟಿಕ್ ಕಾಯಿಲೆ 

ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮತ್ತು ಸಿಸ್ಟಿಕ್ ಫೈಬ್ರೋಸಿಸ್ ಇರುವವರಲ್ಲಿಯೂ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಈ ಸಮಸ್ಯೆಗಳಿರುವವರಲ್ಲಿ ಮೇದೋಜ್ಜೀರಕ ಗ್ರಂಥಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವುದಿಲ್ಲ, ಆಗ ರಕ್ತದಲ್ಲಿರುವ ಗ್ಲುಕೋಸ್ ಹೀರಿಕೊಳ್ಳಲು ಸಾಧ್ಯವಾಗದೆ ಸಕ್ಕರೆಯಂಶ ಹೆಚ್ಚುವುದು.

ಪಿಸಿಒಎಸ್‌ (Polycystic Ovarian Syndrome) 

ಪಿಸಿಒಎಸ್ ಇರುವವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಇರುತ್ತದೆ, ಅಲ್ಲದೆ ಹಾರ್ಮೋನ್‌ಗಳ ಅಸಮತೋಲನ ಉಂಟಾಗಿರುತ್ತದೆ. ಇದರಿಂದಾಗಿ ಟಸ್ಟೋಸ್ಟಿರೋನೆ, ಇನ್ಸುಲಿನ್‌ ಹಾಗೂ ಸೈಟೋಕೈನ್ಸ್‌ ಹೆಚ್ಚಾಗಿ ಬಿಡುಗಡೆ ಮಾಡುತ್ತೆ. 

ಪಿಸಿಒಎಸ್‌ ಇರುವವರಲ್ಲಿ ಇನ್ಸುಲಿನ್‌ ಅಧಿಕ ಉತ್ಪತ್ತಿಯಾಗುತ್ತಿದ್ದರೂ ಇನ್ಸುಲಿನ್‌ ಹಾರ್ಮೋನ್‌ಗಳು ರಕ್ತದಲ್ಲಿರುವ ಗ್ಲುಕೋಸ್‌ ಅನ್ನು ಹೀರಿಕೊಂಡು ಶಕ್ತಿಯಾಗಿ ಪರಿವರ್ತಿಸುವುದಿಲ್ಲ. ಇದರಿಂದ ರಕ್ತನಾಳಗಳಲ್ಲಿ ಗ್ಲುಕೋಸ್‌ ಅಧಿಕವಾಗಿ ಪಿಸಿಒಎಸ್‌ ಉಂಟಾಗುವುದು.

ಗಾಯ 

ಗಾಯವಾಗಿದ್ದರೆ, ಮೈಯಲ್ಲಿ ಸುಟ್ಟ ಗಾಯಗಳಾದರೆ ಮಾನಸಿಕ ಒತ್ತಡ ಹೆಚ್ಚಾಗಿ ರಕ್ತನಾಳಗಳಲ್ಲಿ ಗ್ಲುಕೋಸ್‌ ಹೆಚ್ಚಾಗಿ ಸಕ್ಕರೆಯಂಶ ಹೆಚ್ಚಾಗುವುದು. ಈ ರೀತಿಯ ಸಮಸ್ಯೆ ಇರುವವರಲ್ಲಿ ಸೈಟೋಕೈನ್ಸ್ ಅಧಿಕ ಉತ್ಪತ್ತಿಯಾಗುತ್ತೆ. ಇದು ಇನ್ಸುಲಿನ್‌ ಹಾರ್ಮೋನ್‌ಗಳ ಕಾರ್ಯಕ್ಕೆ ತೊಂದರೆ ಉಂಟು ಮಾಡುವುದು.

ಸರ್ಜರಿ ಮತ್ತು ಒತ್ತಡ 

ಸರ್ಜರಿ ಬಳಿಕ ದೈಹಿಕ ನೋವು ಮಾತ್ರವಲ್ಲ ಮಾನಸಿಕ ಒತ್ತಡ ಕೂಡ ಹೆಚ್ಚುವುದು. ಸರ್ಜರಿಯಿಂದ ಮಾನಸಿಕ ಒತ್ತಡ ಹೆಚ್ಚಾದಾಗ ಸೈಟೋಕೈನ್ಸ್ ಹಾರ್ಮೋನ್‌ ಹೆಚ್ಚುವುದು, ಇದು ಲಿವರ್‌ನಲ್ಲಿ ಗ್ಲುಕೋಸ್‌ ಉತ್ಪತ್ತಿ ಹೆಚ್ಚಿಸುವುದು ಹಾಗೂ ಇನ್ಸುಲಿನ್‌ ರಕ್ತದಿಂದ ಗ್ಲುಕೋಸ್ ಹೀರಿಕೊಳ್ಳಲು ತಡೆ ಹಾಕುವುದು. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದು. ಸರ್ಜರಿಯಾದ ಬಳಿಕ ರೋಗಿ ಚೇತರಿಸುವಾಗ ಸಕ್ಕರೆಯಂಶ ನಿಯಂತ್ರಣಕ್ಕೆ ಬರುವುದು.

ಸೋಂಕು 

ನ್ಯೂಮೋನಿಯಾ ಅಥವಾ ಮೂತ್ರ ಸೋಂಕು ಇಂಥ ಕಾಯಿಲೆ ಬಂದಾಗ ಒತ್ತಡದ ಹಾರ್ಮೋನ್‌ ಕೂಡ ಹೆಚ್ಚುವುದು. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದು.

ಔಷಧಗಳ ಅಡ್ಡಪರಿಣಾಮಗಳು

 ಕೆಲವೊಂದು ಔಷಧಗಳ ಅಡ್ಡಪರಿಣಾಮದಿಂದ ಕೂಡ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದು. dopamine, norepinephrine, tacrolimus and cyclosporine, corticosteroids ಈ ಬಗೆಯ ಔಷಧಿ ತೆಗೆದುಕೊಳ್ಳುವಾಗ ಅದರ ಅಡ್ಡಪರಿಣಾಮದಿಂದಾಗಿ ರಕ್ತದಲ್ಲಿ ಗ್ಲುಕೋಸ್‌ ಹೆಚ್ಚುವುದು.

ಒಬೆಸಿಟಿ 

ಮೈ ತೂಕ ತುಂಬಾ ಹೆಚ್ಚಾದರೆ ಗ್ಲುಕೋಸ್‌ ಅಥವಾ ಇನ್ಸುಲಿನ್‌ ಉತ್ಪತ್ತಿಯಲ್ಲಿ ಅಸಮತೋಲನ ಉಂಟಾಗುವುದು. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದು.

ವಂಶವಾಹಿಯಾಗಿ

 ಕೆಲವರಿಗೆ ವಂಶವಾಹಿಯಾಗಿಯೂ ಕಂಡು ಬರುತ್ತದೆ. ಹೀಗೆ ಕಂಡು ಬಂದರೆ ದೊಡ್ಡ ತೊಂದರೆಯೇನಿಲ್ಲ. ವ್ಯಾಯಾಮ ಹಾಗೂ ಆಹಾರಕ್ರಮದ ಮೂಲಕ ಸಕ್ಕರೆಯಂಶ ನಿಯಂತ್ರಣದಲ್ಲಿಡಿ.





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries