ಕೊಯಿಕ್ಕೋಡ್: ಮಾಡೆಲ್ ಮತ್ತು ನಟಿಯೊಬ್ಬರ ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್ನಲ್ಲಿ ಪತ್ತೆಯಾಗಿದೆ.
ಬಾಡಿಗೆ ಮನೆಯಲ್ಲಿ ಕಾಸರಗೋಡಿನ ನಟಿ-ಮಾಡೆಲ್ ನಿಗೂಢ ಸಾವು: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತಾಯಿ
0
ಮೇ 14, 2022
Tags
ಕೊಯಿಕ್ಕೋಡ್: ಮಾಡೆಲ್ ಮತ್ತು ನಟಿಯೊಬ್ಬರ ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್ನಲ್ಲಿ ಪತ್ತೆಯಾಗಿದೆ.
ಮೃತಳನ್ನು ಸಹನಾ (20) ಎಂದು ಗುರುತಿಸಲಾಗಿದೆ. ಈಕೆ ಕಾಸರಗೋಡಿನ ಛೆರುವಥೂರು ಮೂಲದ ನಿವಾಸಿ. ಕಳೆದ ರಾತ್ರಿ ಕೊಯಿಕ್ಕೋಡಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.
ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಹನಾ ಮೃತದೇಹ ಪತ್ತೆಯಾಗಿದೆ. ಸಂಬಂಧಿಕರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಆಕೆಯ ಗಂಡ ಸಾಜದ್ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಹನಾ ಒಂದೂವರೆ ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿಂದೊಮ್ಮೆ ಕೊಲೆ ಮಾಡುವುದಾಗಿ ಸಾಜದ್ ಬೆದರಿಕೆ ಹಾಕಿದ್ದ ಎಂದು ಸಹನಾ ಕುಟುಂಬಸ್ಥರು ತಿಳಿಸಿದ್ದಾರೆ.