ತಿರುವನಂತಪುರಂ: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ಮೊದಲ ವಾರ್ಷಿಕ ಸಂಭ್ರಮಾಚರಣೆ 'ನನ್ನ ಕೇರಳಂ' ಮೆಗಾ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ರಾಜಧಾನಿ ತಿರುವನಂತಪುರದಲ್ಲಿ ನಿನ್ನೆ ಆರಂಭವಾಗಿದೆ. ಇದರ ಅಂಗವಾಗಿ, ಮೇ 27 ರಿಂದ ಜೂನ್ 02, ರವರೆಗೆ ತಿರುವನಂತಪುರದ ಕನಕಕುನ್ನುನಲ್ಲಿ ಖ್ಯಾತ ಕಲಾವಿದರ ನೇತೃತ್ವದಲ್ಲಿ ಮೆಗಾ ಪ್ರದರ್ಶನ ಮಾರುಕಟ್ಟೆ ಮೇಳ, ಆಹಾರ ಮೇಳ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ನನ್ನ ಕೇರಳಂ ಮೆಗಾ ಮೇಳವು ರಾಜ್ಯ ಸರ್ಕಾರದ ಚಟುವಟಿಕೆಗಳು ಮತ್ತು ಮುಂದಿನ ದಿನಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಅಭಿವೃದ್ಧಿ ಯೋಜನೆಗಳ ನೇರ ನೋಟವಾಗಿದೆ. ಮೊದಲ ವಾರ್ಷಿಕೋತ್ಸವದ ಅಂಗವಾಗಿ ತಿರುವನಂತಪುರ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗುವುದು.
ಮೇ 27ರಂದು ಕನಕಕುನ್ನು ನಿಶಾಗಂಧಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವಂÀಕುಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಾರಿಗೆ ಸಚಿವ ಆಂಟನಿ ರಾಜು ವಹಿಸಲಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್.ಅನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮೇ 27 ರಂದು ಸಂಜೆ 7 ಗಂಟೆಗೆ ಉರಾಳಿ ತಂಡದವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೇ 28 ರಂದು ಸಂಜೆ 7 ಗಂಟೆಗೆ ಖ್ಯಾತ ಸೂಫಿ ಸಂಗೀತಗಾರ ಸಮೀರ್ ಬಿನ್ಸಿ ಮತ್ತು ತಂಡದವರಿಂದ ಸೂಫಿ ಸಂಗೀತ ಕಛೇರಿ ನಡೆಯಲಿದೆ. ಮೇ 29ರಂದು ಸಂಜೆ 6.30ಕ್ಕೆ ಮಡಿಕೇರಿ ತಂಡದವರಿಂದ ಜಾನಪದ ಗೀತಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ.