ಕಾಸರಗೋಡು: ಸಹಕಾರಿ ಸಂಘಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂಸ್ಥೆಯಾಗಿದ್ದು, ಎಲ್ಲಾ ಹಂತಗಳಲ್ಲಿ ಸಹಕಾರಿ ಕ್ಷೇತ್ರ ತೊಡಗಿಸಿಕೊಂಡಿರುವುದಾಗಿ ಸ್ಥಳೀಯಾಡಳಿತ ಹಾಗೂ ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್ ತಿಳಿಸಿದ್ದಾರೆ. ಅವರು ಶನಿವಾರ ಕಾಞಂಗಾಡ್ ಕೋ-ಆಪರೇಟಿವ್ ಹಾಸ್ಪಿಟಲ್ ಸೊಸೈಟಿಯ ನೇತೃತ್ವದಲ್ಲಿ ಕುನ್ನುಮ್ಮಲ್ ನಲ್ಲಿ ಸಹಕಾರಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಬೆಂಬಲದಿಂದ ಕಾಞಂಗಾಡು ಸಹಕಾರಿ ಆಸ್ಪತ್ರೆ ಬಹುಬೇಗ ಪ್ರಗತಿಯ ಪಥದತ್ತ ಸಾಗಿದ್ದು, ಪ್ರಸಕ್ತ ಆಸ್ಪತ್ರೆಯನ್ನು ವಿಸ್ತರಿಸುವ ಕಾಲ ಸನ್ನಿಹಿತವಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆ ಹೊಂದಿರುವುದಾಗಿ ತಿಳಿಸಿದರು. ಐದು ವರ್ಷಗಳಲ್ಲಿ 20 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ಸರ್ಕಾರದ ಭರವಸೆಯನ್ನು ಈಡೇರಿಸಲು ಶ್ರಮಿಸಲಾಗುವುದು ಎಂದೂ ತಿಳಿಸಿದರು.
ಶಾಸಕ ಇ. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಅಜನೂರು ಗ್ರಾಪಂ ಅಧ್ಯಕ್ಷ ಟಿ. ಶೋಭಾ, ಪಳ್ಳಿಕ್ಕೆರೆ ಗ್ರಾಪಂ ಅಧ್ಯಕ್ಷ ಎಂ ಕುಮಾರನ್, ಮಡಿಕೈ ಗ್ರಾಪಂ ಅಧ್ಯಕ್ಷೆ ಎಸ್ ಪ್ರೀತಾ, ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಯಾ ಕುಮಾರಿ, ನಗರಸಭಾ ಸದಸ್ಯರಾದ ಎಂ ಬಾಲರಾಜ್, ಶೋಭಾ ಮತ್ತು ಹೊಸದುರ್ಗ ಸಹಾಯಕ ರಿಜಿಸ್ಟ್ರಾರ್ ಕೆ.ರಾಜಗೋಪಾಲನ್, ಡಾ. ಕೆ.ವಿವಾಸು, ಕೊಟ್ಟಚೇರಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ವಿಶ್ವನಾಥನ್, ಕಾಞಂಗಾಡ್ ಹಾಲು ವಿತರಣಾ ಸಹಕಾರಿ ಸಂಘದ ಅಧ್ಯಕ್ಷ ಎಂ. ಕುಂಞಂಬಾಡಿ ಮುಂತಾದವರು ಉಪಸ್ಥಿತರಿದ್ದರು, . ಕಾಞಂಗಾಡ್ ಸಹಕಾರಿ ಆಸ್ಪತ್ರೆ ಅಧ್ಯಕ್ಷ ವಕೀಲ ಪಿ ಅಪ್ಪುಕುಟ್ಟನ್ ಸ್ವಾಗತಿಸಿದರು. ನಗರಸಭಾ ಸದಸ್ಯ ಎಂ. ಶ್ರೀಕಾಂತ್ ನಾಯರ್ ವಂದಿಸಿದರು.